ಯುವಕರು ಹೆಚ್ಚು ಕ್ರೀಡೆಯಲ್ಲಿ ಪಾಲ್ಗೊಳ್ಳಿ: ಪಿ.ರಾಜೀವ

0
0
loading...

ಪಾಲಬಾವಿ: ಯುವಕರು ಹೆಚ್ಚು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಪಿ.ರಾಜೀವ ಚಾಂಪಿಯನ್‌ ಟ್ರೋಪಿ ಕೆವಲ ಹಂದಿಗುಂದ ಗ್ರಾಮಕ್ಕೆ ಸಿಮಿತವಲ್ಲ ಕುಡಚಿ ಮತಕ್ಷೇತ್ರದ ಎಲ್ಲ ಪಟ್ಟಣ ಹಾಗೂ ಗ್ರಾಮಗಳಲ್ಲಿ ಕಬ್ಬಡ್ಡಿ ಕ್ರೀಡೆಯ ಬಗ್ಗೆ ಒಲವು ನೀಡಲಾಗುವದು.
ಎಂಎಲ್‌ಎ ವಿಶೇಷ ಅನುದಾದಲ್ಲಿ ಕಬ್ಬಡ್ಡಿ ಕ್ರೀಡೆಯ ವಿಕ್ಷಣೆಗೆ ಗ್ಯಾಲರಿ ಮಾಡಿಸಿಕೊಡಲಾಗುವದು ಎಂದು ಶಾಸಕ ಪಿ.ರಾಜೀವ ಹೇಳಿದರು. ಅವರು ಸಮೀಪದ ಹಂದಿಗುಂದ ಗ್ರಾಮದಲ್ಲಿ ಮಹಾನವಮಿ ದಸರಾ ಹಾಗೂ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಪಿ.ರಾಜೀವ ಗೆಳೆಯ ಬಳಗ, ಶ್ರೀ ಸಿದ್ದೇಶ್ವರ ಕಬ್ಬಡ್ಡಿ ತಂಡ ಇವರ ಸಂಯುಕ್ತ ಆಶ್ರಯದಲ್ಲಿ ಸತತ 3ನೇ ಬಾರಿಗೆ ಆಯೋಜನೆ ಮಾಡಿರುವ ಪಿ.ರಾಜೀವ ಚಾಂಪಿಯನ್ಸ್‌ ಕಬ್ಬಡ್ಡಿ ಟ್ರೋಫಿ-2108ರ ಉದ್ಘಾಟನಾ ಸಮಾರಂಭದಲ್ಲಿ ಅಥಿತಿ ಉಪನ್ಯಾಸ ನೀಡಿದರು. ಂ
iÀುುವ ಧುರೀಣ ಮಲ್ಲಿಕಾರ್ಜುನ ತೇಲಿ, ನಿರ್ಮಾಪಕ ಸಿದ್ದು ಕೊಣ್ಣುರ ಮಾತನಾಡಿದರು. ಗುರುಲಿಂಗಯ್ಯ ಸ್ವಾಮೀಜಿ ದಿವ್ಯ ಸಾನಿದ್ಯವಹಿಸಿದ್ದರು. ಗ್ರಾ.ಪಂ.ಉಪಾಧ್ಯಕ್ಷ ಶಿವಪ್ಪ ಹೊಸುರ, ಭಾಜಪ ಕುಡಚಿ ಮಂಡಲ ಅಧ್ಯಕ್ಷ ಬಸಗೌಡ ಆಸಂಗಿ, ಪರಗೌಡ ಪಾಟೀಲ, ಮುತ್ತಪ್ಪ ಉಳ್ಳೆಗಡ್ಡಿ, ಹನುಮಂತ ಮಿರ್ಜಿ, ಶಿವಪ್ಪ ಮಿರ್ಜಿ, ಶ್ರೀಶೈಲ ತೇಲಿ, ಹನುಮಂತ ಯಲಶೆಟ್ಟಿ, ಮುರುಗೆಪ್ಪ ಅಂದಾನಿ, ಶಂಕರಗೌಡ ಪಾಟೀಲ, ಕುಮಾರ ಹಿರೇಮಠ, ಸಂಗಪ್ಪ ಮಿರ್ಜಿ, ರಾಕೇಶ ಚಿಲ್ಲಾಳಶೆಟ್ಟಿ, ಪ್ರಕಾಶ ಬಂದಿ, ಬಸವರಾಜ ದೇವರವರ, ಬಸವಲಿಂಗ ಸವಸುದ್ದಿ, ಮಹಾಲಿಂಗ ಬಾಗೇವಾಡಿ ಇದ್ದರು.

loading...