ರಫೇಲ್ ಒಪ್ಪಂದ ಪ್ರಕ್ರಿಯೆ ಕುರಿತು ವಿವರ ನೀಡಿ: ಕೇಂದ್ರಕ್ಕೆ ಸುಪ್ರೀಂ ಸೂಚನೆ

0
0
loading...

ನವದೆಹಲಿ: ರಫೇಲ್ ಫೈಟರ್​​ ಜೆಟ್​ ಡೀಲ್ ಕುರಿತಾದ ಮಾಹಿತಿ ನೀಡುವಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್​ ಕೈಗೆತ್ತಿಕೊಂಡಿದೆ.

59 ಸಾವಿರ ಕೋಟಿಯ 36 ಫೈಟರ್​ ಜೆಟ್​ಗಳನ್ನು ಫ್ರಾನ್ಸ್​ನಿಂದ  ಭಾರತಕ್ಕೆ ಆಮದು ಮಾಡಿಕೊಳ್ಳುವ ಡೀಲ್​ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಅರ್ಜಿದಾರ ಎಂ.ಎಲ್​ ಶರ್ಮಾ ಡೀಲ್​ನ ಸಂಪೂರ್ಣ ಮಾಹಿತಿ ನೀಡುವಂತೆ ಮನವಿ ಮಾಡಿದ್ದರು.

ಸದ್ಯ ವಿಚಾರಣೆ ಆರಂಭಿಸಿರುವ ಸುಪ್ರೀಂ, ಡೀಲ್​ ಕುರಿತಾದ ಮಾಹಿತಿಯನ್ನು ಕೋರ್ಟ್​ಗೆ ಸಲ್ಲಿಕೆ ಮಾಡಲು ಕೇಂದ್ರಕ್ಕೆ ಸೂಚಿಸಿದೆ.  ಇದೇ ವೇಳೆ, ಇದರಲ್ಲಿ ಬೆಲೆಗೆ ಸಂಬಂಧ ಪಟ್ಟ ವಿಷಯದ ಬಗ್ಗೆ ಸುಪ್ರೀಂ ಗಮನ ಹರಿಸುವುದಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲ ಕೇಂದ್ರದ ನಿರ್ಧಾರಕ್ಕೆ ಗೌರವ ನೀಡಿಯೇ, ಅವರಿಂದ ಮಾಹಿತಿಯನ್ನ ಸಲ್ಲಿಕೆ ಮಾಡುವಂತೆ ಸುಪ್ರೀಂ ನಿರ್ದೇಶನ ನೀಡಿದೆ.

ಯಾವುದೇ ರೀತಿಯ ನೋಟಿಸ್ ಜಾರಿ ಮಾಡುವುದಿಲ್ಲ. ಅರ್ಜಿದಾರರ ವಾದ ಸಂಪೂರ್ಣ ಅಸಮರ್ಪಕವಾಗಿದೆ. ಇದನ್ನು ನ್ಯಾಯಾಲಯದ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಸುಪ್ರೀಂ ಹೇಳಿದೆ.

loading...