ರಸ್ತೆ ಅಪಘಾತ ಯುವತಿ ಸಾವು : ಗೋವಾ ಶಾಸಕ ಪುತ್ರನ ಕಾರಿಗೆ ಬೆಂಕಿ

0
2
loading...

ರಸ್ತೆ ಅಪಘಾತ ಯುವತಿ ಸಾವು : ಗೋವಾ ಶಾಸಕ ಪುತ್ರನ ಕಾರಿಗೆ ಬೆಂಕಿ

ಕನ್ನಡಮ್ಮ ಸುದ್ದಿ-ಬೆಳಗಾವಿ: ರಸ್ತೆ ಅಪಘಾತದಲ್ಲಿ ಯುವತಿ ಸಾವಿಗೆ ಕಾರಣರಾದ ಗೋವಾದ ಮಾಪಸ ಕ್ಷೇತ್ರದ ಶಾಸಕ ಪ್ರಾನ್ಸಿಸ್ ಡಿಸೋಜಾ ಪುತ್ರ ಕೈಲ್ ಟಿಕ್ಲೋನನ್ನು ಬೆಳಗಾವಿ ಸಂಚಾರಿ ಠಾಣೆಯ ಪೋಲಿಸರು ನಿನ್ನೆ ತಡರಾತ್ರಿ ಬಂಧಿಸಿದ್ದಾರೆ .

ನಿನ್ನೆ ಸಾಯಂಕಾಲ ನಗರದ ಉಜ್ವಲ ನಗರದ ಬಳಿ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಯುವತಿ ತೇಹನಿಯತ ಬಿಸ್ತಿ ಎಂಬವಳು ಸಾವನೊಪ್ಪಿದಳು ,ಇನ್ನೂರ್ವಳು ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಳು ‌.ಅಪರಾಧಿ ಮೇಲೆ ೨೭೯,೩೩೮,೩೦೪ಎ ipc ೧೮೪ ಐಎಂಇ ಆಕ್ಟ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೋಲಿಸರು ಕಾರು ಚಾಲಕ ಕೈಲ್ ಟಿಕ್ಲೊನನ್ನು ಬಂಧಿಸಿದ್ದಾರೆ .

loading...