ರಾಣಿ ಚನ್ನಮ್ಮ ಜಯಂತೋತ್ಸವ

0
0
loading...

ಹಳಿಯಾಳ: ವೀರರಾಣಿ ಕಿತ್ತೂರ ಚೆನ್ನಮ್ಮ ನವರ ಪ್ರತಿಮೆಯನ್ನು ಹಳಿಯಾಳ ಪಟ್ಟಣದಲ್ಲಿ ಪ್ರತಿಷ್ಠಾಪಿಸಿ ತನ್ಮೂಲಕ ಅವರ ಜೀವನದ ಪ್ರೆÃರಣೆ ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೆÃಕರ.
ತಾಲೂಕಾ ಕಚೇರಿಯಲ್ಲಿ ಮಂಗಳವಾರ ತಾಲೂಕಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಿತ್ತೂರ ರಾಣಿ ಚೆನ್ನಮ್ಮ ರವರ ಜಯಂತೋತ್ಸವದಲ್ಲಿ ಅವರು ಮಾತನಾಡಿದರು. ಭಾರತವನ್ನು ಪರಕೀಯರಿಂದ ಮುಕ್ತಗೊಳಿಸಲು ಓರ್ವ ಮಹಿಳೆಯಾಗಿ ಹೋರಾಡಿದ ಕಿತ್ತೂರ ರಾಣಿ ಚೆನ್ನಮ್ಮ ಅವರ ಹೋರಾಟವು ಎಲ್ಲರಿಗೂ ಪ್ರೆÃರಣೆಯಾಗಿದೆ ಎಂದರು.

ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮಹೇಶ ಕುರಿಯವರ, ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಸಂತೋಷ ರೇಣಕೆ, ಗ್ರೆÃಡ್೨ ತಹಶೀಲ್ದಾರ ರತ್ನಾಕರ ಮೊದಲಾದವರು ವೇದಿಕೆಯಲ್ಲಿದ್ದರು. ನಿವೃತ್ತ ಉಪನ್ಯಾಸಕ ಸುರೇಶ ಕಡೇಮನಿ ಉಪನ್ಯಾಸ ನೀಡಿದರು.

loading...