ರಾಮಾಯಣದ ಮೂಲಕ ಭಾರತವು ಜಗತ್ತಿನ ಗೌರವಕ್ಕೆ ಪಾತ್ರವಾಗಿದೆ

0
0
loading...

ಹಳಿಯಾಳ: ತಾಲೂಕಾ ಆಡಳಿತ, ತಾಲೂಕ ಪಂಚಾಯತ, ಪುರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ತಾಲೂಕಿನ ಮಹರ್ಷಿ ವಾಲ್ಮಿಕಿ ಸಂಘಟನೆಗಳ ವತಿಯಿಂದ ಶ್ರಿÃ ಮಹರ್ಷಿ ವಾಲ್ಮಿಕಿ ಜನ್ಮದಿನೋತ್ಸವ ಸಮಾರಂಭವು ಬುಧವಾರ ತಾಲೂಕಾ ಕಚೇರಿ ಸಭಾಂಗಣದಲ್ಲಿ ಜರುಗಿತು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೆÃಕರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರಾಮಾಯಣದಂತಹ ಮೇರುಕೃತಿಯನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ ವಾಲ್ಮಿಕಿ ಮಹರ್ಷಿಗಳು ಪ್ರಾತಃಸ್ಮರಣೀಯರಾಗಿದ್ದಾರೆ. ರಾಮಾಯಣದ ಮೂಲಕ ಭಾರತವು ಜಗತ್ತಿನ ಗೌರವಕ್ಕೆ ಪಾತ್ರವಾಗಿದೆ. ರಾಮರಾಜ್ಯವು ಆದರ್ಶ ಆಡಳಿತದ ಪರಿಕಲ್ಪನೆಯಾಗಿದ್ದು ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ರಾಮಾಯಣದಂತಹ ಮಹಾಕಾವ್ಯ ರಚಿಸುವ ಮಹಾನತೆ ಹಾಗೂ ಯೋಗ್ಯತೆ ಹೊಂದಬಹುದು ಎಂಬುದನ್ನು ವಾಲ್ಮಿಕಿಯ ಜೀವನಚರಿತ್ರೆಯಿಂದ ತಿಳಿದುಕೊಳ್ಳಬಹುದಾಗಿದೆ ಎಂದರು.

ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯ ಕೃಷ್ಣಾ ಪಾಟೀಲ, ತಹಶೀಲ್ದಾರ ವಿದ್ಯಾಧರ ಗುಳಗುಳಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮಹೇಶ ಕುರಿಯವರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಬಿ. ಸಣ್ಣೆÃರ ಹಾಗೂ ಹಿರಿಯ ಅಧ್ಯಾತ್ಮಿಕ ಚಿಂತಕ ಎಂ.ಎನ್. ತಳವಾರ, ಅನಿಲ ನಾಯ್ಕರ್, ಜಯಶ್ರಿÃ ನಾಯ್ಕ ಮೊದಲಾದವರು ವೇದಿಕೆಯಲ್ಲಿದ್ದರು. ಶಿಕ್ಷಕ ಸಿದ್ದಪ್ಪಾ ಬಿರಾದಾರ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆಯ ದರ್ಶನ ನಾಯ್ಕ ವಂದಿಸಿದರು.

ಸನ್ಮಾನ:- ವಿವಿಧ ಕ್ಷೆÃತ್ರಗಳಲ್ಲಿ ಸಾಧನೆಗೈಯುತ್ತಿರುವ ವಾಲ್ಮಿಕಿ ಸಮಾಜದ ಪ್ರತಿಭೆಗಳಾದ ಗಾಯಕಿ ಮೇಘನಾ ನಾಯ್ಕ, ಶಿಕ್ಷಕರಾದ ಸಿದ್ದಪ್ಪಾ ಬಿರಾದಾರ, ನಾರಾಯಣ ನಾಯ್ಕ, ನಿವೃತ್ತ ಉಪನ್ಯಾಸಕ ಸುರೇಶ ಕಡೇಮನಿ ಇವರುಗಳಿಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

loading...