ರೈತರೊಂದಿಗೆ ವಿಮೆ ಕಂಪನಿ ಚೆಲ್ಲಾಟ

0
0
loading...

 

ಮೌಲಾಹುಸೇನ ಬುಲ್ಡಿಯಾರ್
ಕನ್ನಡಮ್ಮ ಸುದ್ದಿ-ಕೊಪ್ಪಳ: ಮಳೆ ಇಲ್ಲದೇ ಸತತ ಬರ ಪರಿಸ್ಥಿತಿಯಿಂದ ಬಳಲುತ್ತಿರುವ ಜಿಲ್ಲೆಯ ರೈತರು ಕಳೆದ 16 ವರ್ಷಗಳಿಂದ ನಿರಂತರ ಒಂದಿಲ್ಲ ಒಂದು ಕಾರಣಕ್ಕೆ ಮಳೆ, ಬೆಳೆ ಇಲ್ಲದೆ ನಷ್ಟವನ್ನು ಅನುಭವಿಸುತ್ತ ಬಂದಿದ್ದು, ಬೆಳೆ ನಷ್ಟಕ್ಕೆ ಸರ್ಕಾರದ ನಿಯಾನುಸಾರ ಬೆಳೆ ವಿಮೆ ತುಂಬಿದ್ದರು ಸಹ ವಿಮೆ ಕಂಪನಿಗಳ ಹಾಗೂ ಸರ್ಕಾರದ ನಿರ್ಧಾರಗಳಿಂದ ರೈತ ಸಮುದಾಯ ತತ್ತರಿಸುವಂತಾಗಿದೆ. ಜಿಲ್ಲೆಯಲ್ಲಿ 2016-17ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 38530 ರೈತರು ಬೆಳೆವಿಮೆ ತುಂಬಿದ್ದು, 59.67 ಕೋಟಿ ರೂ. ವಿಮೆ ಮಂಜೂರಾಗಿತ್ತು. ಇದರಲ್ಲಿ 34433 ರೈತರಿಗೆ 53.30 ಕೋಟಿ ರೂ. ವಿಮೆ ಪರಿಹಾರ ಬಂದಿದೆ. ಇದರಲ್ಲೇ ಇನ್ನು 4097 ರೈತರಿಗೆ 6.37 ಕೋಟಿ ರೂ. ಮೊತ್ತ ಬಾಕಿ ಉಳಿದುಕೊಂಡಿದೆ. ಇದು ಈಗ ಸರ್ಕಾರ ಮಟ್ಟದಲ್ಲಿದ್ದು, ಹಲವಾರು ಸಭೆಗಳನ್ನು ನಡೆಸಿ ಪರಿಹಾರ ಮೊತ್ತ ಬಿಡುಗಡೆಗೆ ವಿಮೆ ಕಂಪನಿಗಳಿಗೆ ಸೂಚಿಸಿದ್ದರು, ಕೆಲ ತಾಂತ್ರಿಕ ಕಾರಣಗಳಿಂದ ತಡೆಹಿಡಿಯಲಾಗಿದೆ. ಇನ್ನೂ 2016ರ ಹಿಂಗಾರು ಹಂಗಾಮಿನಲ್ಲಿ 65520 ರೈತರು ವಿಮೆ ತುಂಬಿದ್ದು, ರೂ. 77.51 ಕೋಟಿ ಹಣ ಪರಿಹಾರ ಮಂಜೂರಾಗಿದೆ. ಆದರೆ ಇದರಲ್ಲಿ ಕೇವಲ 30.55 ಕೋಟಿ ರೂ. ಬಿಡುಗಡೆಯಾಗಿದ್ದು, 33877 ರೈತರ ಖಾತೆಗೆ ಜಮಾ ಮಾಡಲಾಗಿದೆ. ಜಮಾಮಾಡಲಾದ ಈ ಮೊತ್ತದ ಪೈಕಿ 11 ಕೋಟಿ ರೂ. ಚೆಕ್ ಬೌನ್ಸ್ ಆಗಿದ್ದು, ಇನ್ನು ಪೂರ್ಣ ಪ್ರಮಾಣದಲ್ಲಿ ವಿಮೆ ವಿತರಣೆಯಾಗಿಲ್ಲ. ಸುಮಾರು 31643 ರೈತರಿಗೆ ಬರಬೇಕಾಗಿರುವ ರೂ. 46.96 ಕೋಟಿ ಮೊತ್ತದ ವಿಮೆ ಹಣ ಬಿಡುಗಡೆಯಾಗಬೇಕಿದೆ. ಆದರೆ ಇದಕ್ಕೆ ವಿಮೆ ಕಂಪನಿ ತಾಂತ್ರಿಕ ಕಾರಣಗಳಿಂದ ಬಾಕಿ ಉಳಿಸಿಕೊಂಡಿದೆ. 2016 ರ ಸಾಲಿನ ಹಿಂಗಾರು ಹಂಗಾಮಿನಲ್ಲಿ ಬೆಳೆವಿಮೆ ತೀರಾ ಜಟಿಲವಾಗುತ್ತಿದ್ದು, ವಿಮೆ ತುಂಬಿ 2 ವರ್ಷ ಕಳೆದರೂ ಸರ್ಕಾರ ಹಾಗೂ ಅಧಿಕಾರಿಗಳು ವಿಮಾ ಕಂಪನಿ ತಾಳಕ್ಕೆ ಹೆಜ್ಜೆ ಹಾಕುತ್ತಿದ್ದು, ವಿಮೆ ನಿರೀಕ್ಷೆಯಲ್ಲಿರುವ ರೈತರು ಯಾತನೆ ಅನುಭವಿಸುವಂತಾಗಿರುವುದು ದುರಂತವೇ ಸರಿ. ಜಿಲ್ಲೆಯಲ್ಲಿ ಸತತ ಬರ ಆವರಿಸುತ್ತಿರುವ ಕಾರಣ ಜಿಲ್ಲಾಡಳಿತವೇ ಆಸಕ್ತಿ ತೋರಿ 2016ರಲ್ಲಿ ಸಮರೋಪಾದಿಯಲ್ಲಿ ರೈತರಿಂದ ಬೆಳೆವಿಮೆ ತುಂಬಿಸಿದೆ. ಮೊದಮೊದಲು ವಿಮೆ ಕಟ್ಟಲು ಹಿಂದೇಟು ಹಾಕುತ್ತಿದ್ದ ರೈತರು ಜಿಲ್ಲಾಧಿಕಾರಿ, ಕೃಷಿ ಅಧಿಕಾರಿಗಳ ಮಾತು ಕೇಳಿ ಸಾಲುಗಟ್ಟಿ ವಿಮೆ ತುಂಬಿದರು. ಆದರೆ, ವಿಮೆ ತುಂಬಿ ಎರಡು ವರ್ಷ ಕಳೆದರೂ ವಿಮೆ ಹಣಕ್ಕಾಗಿ ಪರದಾಟ ಮುಂದುವರೆದಿದ್ದು, ನಿತ್ಯ ಕಚೇರಿ ಅಲೆಯುವಂತಾಗಿದೆ.

ಹಿಂಗಾರು ಬೆಳೆ ಇಳುವರಿ ಲೆಕ್ಕಚಾರ ಈಗ ದೆಹಲಿಗೆ : 2016ರ ಹಿಂಗಾರು ಬೆಳೆವಿಮೆ ಪಾವತಿಗೆ ಮೊದಲಿನಿಂದಲೂ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಿವೆ. ಬರ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡಗಳು ಸಮೀಕ್ಷೆ ನಡೆಸಿ ವರದಿ ನೀಡಿವೆ. ವಿಮೆ ತುಂಬಿ ವರ್ಷ ಕಳೆದ ಮೇಲೆ ಸೊನ್ನೆ ಇಳುವರಿಯನ್ನು ಪ್ರಶ್ನಿಸಿ ವಿಮಾ ಕಂಪನಿ 4 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ತಿರಸ್ಕರಿಸಿತ್ತು. ಪ್ರಕರಣಗಳ ವಿಚಾರಣೆ ನಡೆಸಿದ ಡಿಸಿ ವಿಮಾ ಕಂಪನಿ ವಾದ ತಳ್ಳಿ ಹಾಕಿ ವರದಿ ಸರಿಯಿದೆ ಎಂದು ಮತ್ತೊಮ್ಮೆ ವರದಿ ನೀಡಿದ್ದಾರೆ.
ಅದಾದ 6 ತಿಂಗಳಗಳ ಬಳಿಕ 30 ಕೋಟಿ ರೂ. ಬಿಡುಗಡೆಯಾಗಿದೆ. ಉಳಿದ ಹಣ ಪ್ರಶ್ನಿಸಿದರೆ, ಬಿತ್ತನೆ ಮಾಡಿz್ದÉೀ ನಿಜವಾದರೆ, ಸೊನ್ನೆ ಇಳುವರಿ ಬರಲು ಸಾಧ್ಯವಿಲ್ಲವೆಂದು ತಕರಾರು ತೆಗೆದಿದೆ. ಇದೀಗ ಸಿಂಥೆಟಿಕ್ ಇಳುವರಿ ವರದಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದೆ. ಅದಕ್ಕೆ ರಾಜ್ಯ ಸರ್ಕಾರ ನವದೆಹಲಿಯಲ್ಲಿರುವ ಒಚಿhಚಿಟಚಿಟಿobis ಓಚಿಣioಟಿಚಿಟ ಅಡಿoಠಿ ಈoಡಿeಛಿಚಿsಣ ಅeಟಿಣಡಿe (ಒಓಅಈಅ), ಗೆ ದೂರಸ್ಥ ಸಂವೇದನೆಯನ್ನು ಬಳಸಿಕೊಂಡು ಸಿಂಥೆಟಿಕ್ ಇಳುವರಿಯನ್ನು ನಿರ್ಧರಿಸಿ ವರದಿ ಸಲ್ಲಿಸಲು ಕೃಷಿ ಇಲಾಖೆಯ ನಿರ್ದೇಶಕರು ಈಗಾಗಲೇ ಪತ್ರವನ್ನು ಬರೆದಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಜರುಗಿದ ಕೆಡಿಪಿ ಸಭೆಯಲ್ಲಿಯೂ ಈ ಕುರಿತು ಜಿಲ್ಲೆಯ ಸಂಸದ, ಶಾಸಕರು ಬಾಕಿ ಉಳಿದು ಕೊಂಡಿರುವ ವಿಮೆ ಮೊತ್ತ ಬಿಡುಗಡೆಗೆ ಒತ್ತಾಯಿಸಿದ್ದರು, ಪ್ರಸ್ತುತ ಜಿಲ್ಲೆಯಲ್ಲಿನ ಬೆಳೆ ವಿಮೆ ಪರಿಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

loading...