ವಿಶ್ವದಾದ್ಯಂತ ಮತ್ತೆ ಆರ್ಥಿಕ ಬಿಕ್ಕಟ್ಟಿನ ಸೋಂಕು

0
0
loading...

ವಾಷಿಂಗ್ಟನ್(ಅಮೆರಿಕ): ದಶಕದ ಹಿಂದೆ ಲೆಹ್ಮನ್ ಬ್ರದರ್ಸ್ ಬ್ಯಾಂಕ್ ದಿವಾಳಿ ಬಳಿಕ ಉಂಟಾದ ಆರ್ಥಿಕ ಹಿಂಜರಿತದಿಂದ ಜಗತ್ತು ಇನ್ನೂ ಚೇತರಿಸಿಕೊಂಡಲ್ಲ. ಈಗ ಮತ್ತೊಂದು ಸಂಭಾವ್ಯ ಮುಗ್ಗಟ್ಟು ಎದುರಾಗಿದೆ ಎಂಬ ಆತಂಕಕಾರಿ ಅಂಶವನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಮುನ್ಸೂಚನೆ ನೀಡಿದೆ.
ಏರುತ್ತಿರುವ ವ್ಯಾಪಾರದ ಉದ್ವಿಗ್ನತೆ ಹಾಗೂ ಸಾಲದ ಹೊರೆಯಿಂದ ಜಾಗತಿಕ ಆರ್ಥಿಕತೆಯ ಅಪಾಯ ಏರುಗತಿಯಲ್ಲಿ ಸಾಗುತ್ತಿದೆ. ಈ ಬಗ್ಗೆ ಜಾಗತಿಕ ನಾಯಕರು ತಮ್ಮ ವಹಿವಾಟುಗಳನ್ನು ಕಠಿಣಗೊಳಿಸಬೇಕಾದು ಅನಿವಾರ್ಯತೆ ಇದೆ ಎಂದು ಐಎಂಎಫ್ ಮುಂದಿನ ಜಾಗತಿಕ ಬೆಳವಣಿಗೆಯ ಮುನ್ಸೂಚನೆ ನೀಡಿದೆ.
ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಂಘರ್ಷ ಇತರೆ ರಾಷ್ಟ್ರಗಳ ವ್ಯಾಪಾರದ ಬೆಳವಣಿಗೆ ತೀವ್ರ ನಿಧಾನಗತಿಯಲ್ಲಿ ಸಾಗುತ್ತಿದೆ. ಇದರ ಹಿನ್ನಲೆಯಲ್ಲಿ ಐಎಂಎಫ್ 2018- 19ರ ತ್ರೈಮಾಸಿಕ ವಲ್ರ್ಡ್ ಎಕನಾಮಿಕ್ನಲ್ಲಿ ಜಾಗತಿಕ ಜಿಡಿಪಿಯನ್ನು ಶೇ 2.10 ರಿಂದ 3.7 ಕಡಿತಗೊಳಿಸಿದೆ.
ಪರಿಷ್ಕೃತ ಅಂದಾಜಿನ ಅನ್ವಯ ಅಭಿವೃದ್ಧಶೀಲ ರಾಷ್ಟ್ರಗಳ ಆರ್ಥಿಕತೆಯ ಕುಸಿತದ ದೃಷ್ಟಿಕೋನ ಈ ಹಿಂದಿನ ಜುಲೈ ವರದಿಯಂತ್ತಿದ್ದು, 2019ರಲ್ಲಿ ಕೂಡ ಚೀನಾ- ಅಮೆರಿಕ ವ್ಯಾಪಾರ ವಹಿವಾಟು ಕೆಳಮುಖವಾಗಲಿದೆ. ‘ಉತ್ಪಾದನೆ ಹೆಚ್ಚುತ್ತಿದೆ ಮತ್ತು ಭಾಗಶಃ ಸಂಗ್ರಹವಾಗುತ್ತಿದೆ’ ಎಂದು ಐಎಂಎಫ್ ಈ ಹಿಂದಿನ ಸತ್ಯಾಂಶವನ್ನು ಪುನರ್ ಎಚ್ಚರಿಸಿದೆ.
ಜಾಗತಿಕವಾಗಿ ಲಕ್ಷಾಂತರ ಆರ್ಥಿಕ ವಿದ್ಯಾಮಾನಗಳು ಕಳೆದ ಶತಮಾನಗಳಲ್ಲಿ ನಡೆಯುತ್ತಾ ಬಂದಿವೆ. 1930ರ ಕಾಲಘಟದಲ್ಲಿ ಮೊದಲ ಜಾಗತಿಕ ಆರ್ಥಿಕ ಮುಗ್ಗಟ್ಟು ಎದುರಾಗಿತ್ತು. ಆ ನಂತರ ಸಾಮಾನ್ಯವಾಗಿ ಹತ್ತು, ಇಪ್ಪತ್ತು ವರ್ಷಗಳಿಗೆ ಒಮ್ಮೆ ಜಾಗತಿಕ ಆರ್ಥಿಕ ಮುಗ್ಗಟ್ಟುಗಳು ಕಾಣಿಸಿಕೊಳ್ಳುತ್ತಲೇ ಬಂದಿವೆ. 2008ರ ಅಮೆರಿಕದ ಲೆಮನ್ಸ್ ಬ್ರದರ್ಸ್ ಬ್ಯಾಂಕ್ ದಿವಾಳಿ ನಂತರ ಆರ್ಥಿಕ ಮುಗ್ಗಟ್ಟು ಈಗ ಮತ್ತೇ ತೀವ್ರವಾಗುತ್ತಾ ಹೋಗುತ್ತಿದೆ. ಚೇತರಿಕೆ ಕಾಣುವಷ್ಟರಲ್ಲಿ ವಿಶ್ವದ ರಾಜಕೀಯ ವಿದ್ಯಮಾನಗಳ ವ್ಯತಿರಿಕ್ತ ನಡೆ ಮತ್ತು ಹೆಚ್ಚುತ್ತಿರುವ ಬಂಡವಾಳಶಾಹಿ ಪ್ರಜಾತಾಂತ್ರಿಕ ಆರ್ಥಿಕ ಬಿಕ್ಕಟ್ಟು ಪದೆ- ಪದೆ ಸೃಷ್ಟಿಯಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

loading...