ವಿಶ್ವಾಸ ಕಿರಣ ತರಬೇತಿ ಕಾರ್ಯಕ್ರಮ

0
0
loading...

ಕನ್ನಡಮ್ಮ ಸುದ್ದಿ-ಸವಣೂರ: ಇಂದಿನ ಯುಗದಲ್ಲಿ ಜ್ಞಾನರ್ಜನೆ ಮಾಡುವುದು ಮಹತ್ತರ ಸ್ಥಾನವನ್ನು ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಜ್ಞಾನಾರ್ಜನೆಯ ಸಂಪತ್ತನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ಶಾಲಾ ಮುಖ್ಯ ಶಿಕ್ಷಕ ಕೆ.ಜಿ.ಸಿಂಪಿ ಅಭಿಪ್ರಾಯ ಪಟ್ಟರು.
ತಾಲೂಕಿನ ಹತ್ತಿಮತ್ತೂರ ಗ್ರಾಮದ ಎಸ್.ಎಫ್.ದೊಡ್ಡಗೌಡ್ರ ಸರಕಾರಿ ಪ್ರೌಡಶಾಲೆಯಲ್ಲಿ ನಡೆದ 1 ರಿಂದ 10 ನೇ ತರಗತಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಪುನಶ್ಚೇತನ ನೀಡುವ “ವಿಶ್ವಾಸ ಕಿರಣ” ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಹತ್ವದ ಸ್ಥಾನವನ್ನು ಹೊಂದಿದ್ದು.ಈ ದಿಸೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಅಧ್ಯಯನದ ಕಡೆ ಹೆಚ್ಚು ಒಲವನ್ನು ತೋರುವದರ ಮೂಲಕ ವಿದ್ಯಾರ್ಥಿಗಳು ಶ್ರಯೋಭಿವೃದ್ಧಿಗಾಗಿ ಶ್ರಮಿಸಲು ಮಹತ್ವದ ಕಾರ್ಯ ಘಟವಾಗಿದೆ.
ಶೈಕ್ಷಣಿಕ ವರ್ಷದಲ್ಲಿ ಟ್ಯೂಷನ್‍ಗಳ ಹಾವಳಿ ಹೆಚ್ಚಾಗಿದ್ದು ಇದರಿಂದ ಬಡ ವಿದ್ಯಾರ್ಥಿಗಳಿಗೆ ಹಣಕಾಸಿನ ತೊಂದರೆಯಾಗುತ್ತದೆ. ಅಂತಹ ತೊಂದರೆಯನ್ನು ತಪ್ಪಿಸಲು ಸರ್ಕಾರ ಈ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಈ ಕಾರ್ಯಕ್ರಮದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು. ಶಿಕ್ಷಕರು ಭೋಧಿಸುವ ಪಾಠದ ಕಡೆ ಗಮನ ಹರಿಸಿ ಹೆಚ್ಚು ಹೆಚ್ಚು ಅಂಕಗಳನ್ನು ತೆಗೆಯಲು ಪ್ರಯತ್ನಿಸಬೇಕು ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಸಂಪನ್ಯೂಲ ವ್ಯಕ್ತಿ ಹರೀಶ ಕುಲಕರ್ಣಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕುಮಾರ ಕಾಳೆ, ಮಾಸಣಗಿ, ವೆಂಕಟೇಶ ಎಂ.ಆರ್, ಬಸವರಾಜ, ಬಿ.ವಿ.ಭಿಮನಗೌಡ್ರ, ಹಾಗೂ ಹತ್ತಿಮತ್ತೂರ, ಕಳಸೂರ, ಜಲ್ಲಾಪೂರ, ಹೂವಿನಶಿಗ್ಲಿ, ಇಚ್ಚಂಗಿ ಪ್ರೌಡ ಶಾಲೆಗಳ ವಿದ್ಯಾರ್ಥಿಗಳು ಇದ್ದರು.

loading...