ಶಾರ್ಟ್ ಸಕ್ಯೂಟ್: ಅಪಾರ ಪ್ರಮಾಣ ಕಬ್ಬು ಹಾನಿ

0
0
loading...

ಶೇಡಬಾಳ: ವಿದ್ಯುತ್ ಶಾರ್ಟ ಸಕ್ಯೂರ್ಟ್ನಿಂದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದ ಘಟನೆ ಶುಕ್ರವಾರ ಸಮೀಪದ ಉಗಾರ ಖುರ್ದ ಪಟ್ಟಣದಲ್ಲಿ ಸಂಭವಿಸಿದೆ.
ಉಗಾರ ಖುರ್ದ ಪಟ್ಟಣದಲ್ಲಿನ ಅಜೀತ ಅಣ್ಣಾಗೌಡ ಪಾಟೀಲ ಇವರ ಸರ್ವೇ ನಂ. ೮೧/೧ ಬಿ ಎಂಬ ಜಮೀನಿನಲ್ಲಿ ಬೆಳೆದ ೨ ಎಕರೆ ಕಬ್ಬು ಹಾಗೂ ಕಬ್ಬಿನ ಗದ್ದೆಯಲ್ಲಿ ಹನಿ ನೀರಾವರಿಗಾಗಿ ಅಳವಡಿಸಲಾಗಿದ್ದ ಡ್ರಿಪ್ ಪೈಪ ಹಾಗೂ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

ಸುಮಾರು ೪.೨೦ ಲಕ್ಷ ರೂ. ಕಬ್ಬಿನ ಬೆಳೆ ಹಾಗೂ ೯೦ ಸಾವಿರ ರೂ. ಡ್ರಿÃಪ್ ಸಾಮಗ್ರಿಗಳು ಸೇರಿದಂತೆ ಒಟ್ಟು ೫ ಲಕ್ಷ ರೂ. ಹಾನಿಯಾಗಿದೆ. ಕಬ್ಬಿನ ಗದ್ದೆ ಮೇಲಿಂದ ಹಾದು ಹೋದ ವಿದ್ಯುತ್ ತಂತಿಗಳು ನೇತಾಡುತ್ತಿರುವುದರಿಂದ ಒಂದಕ್ಕೊಂದು ಹತ್ತಿ ಶಾರ್ಟ ಸಕ್ಯೂರ್ಟ್ನಿಂದ ಬೆಂಕಿ ತಗುಲಿದೆ. ತಮ್ಮ ಹೊಲದಲ್ಲಿರುವ ತಂತಿಗಳು ಕೆಳಮಟ್ಟದಲ್ಲಿ ನೇತಾಡುತ್ತಿವೆ ಎಂದು ಸ್ಥಳೀಯ ಹೆಸ್ಕಾಂ ಇಲಾಖೆಗೆ ಮೌಖಿಕವಾಗಿ ರೈತನು ಮೊದಲೇ ತಿಳಿಸಿದ್ದರು ಕೂಡ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಅದನ್ನು ಸುರಳಿತಗೊಳಿಸಿರಲಿಲ್ಲ. ಇದರಿಂದಾಗಿ ಈ ಅವಘಡ ಸಂಭವಿಸಿದೆ.
ಘಟನೆ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಉಗಾರ ಖುರ್ದ ಹೆಸ್ಕಾಂ ಇಲಾಖೆಯ ಶಾಖಾಧಿಕಾರಿ ರಾಜು ರಾಠೋಡ, ಗ್ರಾಮ ಲೆಕ್ಕಾಧಿಕಾರಿ, ಕೃಷಿ ಇಲಾಖೆ ಸಹಾಯಕ ಅಧಿಕಾರಿಗಳಾದ ಎಸ್.ಎಂ.ಹೊಸಮನಿ, ಪೋಲಿಸ್‌ರು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...