ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

0
0
loading...

ಇಂಡಿ: ಪಟ್ಟಣದಲ್ಲಿ ಜೈನ ಸಮುದಾಯದವರು ನನ್ನ ಮೇಲೆ ಇಟ್ಟಿರುವ ಪ್ರಿÃತಿ- ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದೆÃನೆ ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಶ್ರಿÃ ಆದಿನಾಥ ದಿಗಂಬರ ಜೈನ ಬಸದಿಯಲ್ಲಿ ಹಮ್ಮಿಕೊಂಡ ವೃಷಭನಾಥ ಅಲ್ಪ ಸಂಖ್ಯಾತರ ಪತ್ತಿನ ಸಹಕಾರಿ ಸಂಘದವರು ಜೈನ ಬಸದಿಗೆ ಉಚಿತವಾಗಿ ನೀಡಿರುವ ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಜಗತ್ತಿನಲ್ಲಿ ಅತೀ ಶ್ರೆÃಷ್ಠವಾದ ಧರ್ಮ ಜೈನ ಧರ್ಮವಾಗಿದೆ. ಅದು ಸತ್ಯ, ಶಾಂತಿ ಹಾಗೂ ಅಹಿಂಸೆಯಿಂದ ಕೂಡಿದ ಧರ್ಮವಾಗಿದೆ. ಇದರಿಂದ ಮಾತ್ರ ಮಹಾತ್ಮ ಗಾಂಧಿಜೀ ಅವರು ಸ್ವಾಂತತ್ರö್ಯವನ್ನು ತಂದು ಕೊಟ್ಟಿದ್ದಾರೆ. ಅಲ್ಲದೇ ವಿಶೇಷವಾದ ಜೈನ ಧರ್ಮದ ಮೇಲೆ ನಾನು ಪ್ರಿÃತಿ-ವಿಶ್ವಾಸದಿಂದ ಕಾಣುತ್ತಿರುವೆ. ಅಲ್ಲದೇ ನಿಮ್ಮ ಆರ್ಶೀವಾದದಿಂದ ನಾನು ಅಧಿಕಾರಕ್ಕೆ ಬಂದಿದ್ದೆÃನೆ. ಇದು ಶಾಶ್ವತವಲ್ಲ. ಹಾಗೂ ನಾನು ಕೂಡಾ ನಿಮ್ಮ ಸಮುದಾಯದವರಿಗೆ ಸಹಾಯ -ಸಹಕಾರವನ್ನು ನೀಡುವೇ ಎಂದು ಭರವಸೆ ನೀಡಿದರು.
ಪುರಸಭೆ ಅಧ್ಯಕ್ಷ ಶ್ರಿÃಕಾಂತ ಕೂಡಿಗನೂರ ಮಾತನಾಡಿದರು, ಆದಿನಾಥ ದಿಗಂಬರ ಜೈನ ಬಸದಿಯ ಅಧ್ಯಕ್ಷ ಅಜಿತ ಧನಶೆಟ್ಟಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಾಂಕಿನ ಮ್ಯಾನೇಜರ ದೇವು ಕಂಟಿಕಾರ ವರದಿಯನ್ನುವಾಚಿಸಿದರು. ಉಪಾಧ್ಯ ಡಿ.ಬಿ.ಧನಪಾಲ,ನಿರ್ಧೇಕರಾದ ಶ್ರೆÃಣಿಕ ಪಾಂಡ್ರೆ, ಶ್ರಿÃಮತಿ ಪದ್ಮಶ್ರಿÃ ಹಳ್ಳಿ, ಕೇಸರಾಯಿ ಗೋಂಘಡಿ, ಪಿಂಟು ಶಹಾ, ಬಾಹುಬಲಿ ಕೋಟಿ, ಡಿ.ಜೆ ಧನಶೆಟ್ಟಿ, ಮಾನಿಲಾಲ ಶಹಾ, ಚಂದ್ರಕಾಂತ ಶಹಾ, ಸುರೇಶ ಧನಪಾಲ, ರಾವಸಾಹೇಬ ಬೆಲಸೂರೆ, ದೇವೇಂದ್ರಪ್ಪ ಹಳ್ಳಿ, ಪ್ರಕಾಶ ಧನಶೆಟ್ಟಿ, ಅನಂತ ಜೈನ, ಚಂದನ ಧನಪಾಲ, ಶಾಂತು ಧನಶೆಟ್ಟಿ, ಅಜಿತ ಧನಶೆಟ್ಟಿ, ಮುನ್ನಾ ಹಳ್ಳಿ ಮತ್ತಿತ್ತರು ಇದ್ದರು.

loading...