ಸಾಲ ಮನ್ನಾ ದಾಖಲೆಗಳಿಗಾಗಿ ರೈತರ ಪರದಾಟ

0
0
loading...

ಚಿಕ್ಕೋಡಿ :ಕಚೇರಿ ದಿನವಿಡಿ ಕಾದು ಕುಳಿತರೂ ಸಿಗದ ಪಹಣಿ ಪತ್ರ ಸಹಕಾರಿ ಸಂಘಗಳಲ್ಲಿನ ೧ ಲಕ್ಷದ ವರೆಗಿನ ಸಾಲ ಮನ್ನಾ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದೆ ಪಿಕೆಪಿಎಸ್ ನವರು ಗಡವು ವದಂತಿಯಿಂದ ಚಿಕ್ಕೋಡಿ ಪಟ್ಟಣದಲ್ಲಿ ಇಂದು ಸಾವಿರಾರು ರೈತರು ಪರದಾಡುವಂತಾಯಿತು .ಸಾಲ ಮನ್ನಾ ಸೌಲಭ್ಯಕ್ಕೆ ಬೇಕಾದ ಪಹಣಿ ಪತ್ರ ,ಗ್ರಾಮ ಲೆಕ್ಕಾಧಿಕಾರಿಗಳಿಂದ ಪ್ರಮಾಣ ಪತ್ರ,ಪ್ಯಾನ್ ಕಾರ್ಡ್ ,ಪಡಿತರ ಚೀಟಿ, ಆಧಾರ ಕಾರ್ಡ್ ಕೋರ್ಟ್ ಅಪಿಡೇವಿಟ್ ಸೇರಿದಂತೆ ಇತರೆ ದಾಖಲಾತಿಗಳನ್ನು ಸಂಗ್ರಹಿಸಲು ರೈತರು ಹೈರಾಣಾದರು.

loading...