ಸ್ವಾಮೀ ವಿವೇಕಾನಂದರ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆಗೆ; ಹೃದಯ ಪೂರ್ವಕ ಸ್ವಾಗತ

0
0
loading...

ಕನ್ನಡಮ್ಮ ಸುದ್ದಿ -ಬೆಳಗಾವಿ: ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಭಾಷಣಕ್ಕೆ 125 ತುಂಬಿದ ಸವಿನೆನಪಿನ ನಿಮಿತ್ತವಾಗಿ ಯುವಾ ಬ್ರೀಗೆಡ್ ಬೆಳಗಾವಿ ಚಕ್ರವರ್ತಿ ಸೂಲಿಬೆಲೆ ನೇತೃತ್ತದಲ್ಲಿ ಅಯೋಜಿಸಲಾಗಿದ್ದ ಸ್ವಾಮೀ ವಿವೇಕಾನಂದರ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆಯನ್ನು ನಗರದ ನ್ಯಾಯವಾದಿಗಳು ಅದ್ದೂರಿಯಾಗಿ ಬರಮಾಡಿಕೊಂಡ ಅವರು ಪುಷ್ಪರ್ಚಾಣೆ ಹಾಗೂ ಹೂ ಮಾಲೆ ಹಾಕುವದರ ಮೂಲಕ ಹೃದಯ ಸ್ವಾಗತ ಕೋರಿದರು. ಆರ್ ಎಲ್ ಎಸ್ ಮೈದಾನದಿಂದ ರಾಮಕೃಷ್ಣ ಆಸ್ತಮದಿಂದ ನಗರದ ವಿವಿಧ ಕಡೆ ಹಾಗೂ
ಜಿಲ್ಲಾದ್ಯಂತ ದಿಗ್ವಿಜಯ ರಥಯಾತ್ರೆ ಅದ್ದೂರಿಯಾಗಿ ಆಚರಿಸಲಾಯಿತು. ಇದು ವಿಶ್ವದ್ಯಾಂತ ಸ್ವಾಮೀ ವಿವೇಕಾನಂದರ ದಿಗ್ವಿಜಯ ರಥಯಾತ್ರೆ ಹೊರಡಬೇಕು. ಅವರ ಚರಿತ್ರೆಯನ್ನು ದೇಶ ವಿದೇಶಗಳಿಗೆ ತಿಳಿಸಬೇಕೆಂದು ಘೋಷಣೆ ಕೂಗಿ ವಕೀಲರು ಸಂತೋಷ ವ್ಯಕ್ತಪಡಿಸಿದರು.

loading...