ಹಣಕ್ಕಿಂತ ವ್ರತ್ತಿ ಜೀವನ ಮಹತ್ವ: ಕುಲಕರ್ಣಿ

0
0
loading...

ಕನ್ನಡಮ್ಮ ಸುದ್ದಿ-ಧಾರವಾಡ: ಎಸ್.ಡಿ.ಎಮ್ ಇಂಜೀನಿಯರಿಂಗ್ ಕಾಲೇಜಿನ ಎಂ.ಬಿ.ಎ ವಿಭಾಗದ ಪ್ರಥಮ ಅಟೊನೊಮಸ್ ಬ್ಯಾಚಿನ ಪದವಿ ಸಮಾರಂಭವು ಇತ್ತೀಚಗೆ ನೆರವೇರಿತು.
ವಿದ್ಯಾರ್ಥಿನಿ ಪದ್ಮಶ್ರೀ ಭಟ್, ಬ್ಯಾಚಿಗೆ ಪ್ರಥಮ ರಾಂಕ್ ಗಿಟ್ಟಿಸಿ ಚಿನ್ನದ ಪದಕವನ್ನು ಗಳಿಸಿದರು. ವಿಜಶ್ರೀ.ನಾಯಕ ಬ್ಯಾಚಿಗೆ ಎರಡನೆಯ ರಾಂಕ್ ಮತ್ತು ವಿನಾಯಕ. ಕನಕಾಜಿ ಮೂರನೇಯ ರಾಂಕ್ ಗಳಿಸಿದರು. ಪ್ರಥಮ ರಾಂಕ್ ವಿದ್ಯಾರ್ಥಿನಿಗೆ ಚಿನ್ನದ ಪದಕ ಮತ್ತು ಪ್ರಮಾಣ ಪತ್ರ ಹಾಗೂ ಎರಡನೇ ಮತ್ತು ಮೂರನೇಯ ರಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಶೋಧಾ ಟೊಯೋಟಾ ಸಿಇಓ. ಅರ್ ಜಿ ಕುಲಕರ್ಣಿ ಅವರು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದಿಂದ ಜೀವನದಲ್ಲಿ ಮುಂದೆ ಬರಲು ಸಲಹೆ ನೀಡಿದರು. ಆರಂಭದಲ್ಲಿಹಣಕ್ಕಿಂತ ವ್ರತ್ತಿ ಜೀವನಕ್ಕೆ ಮಹತ್ವ ಕೊಡಲು ಸಲಹೆ ನೀಡಿದರು. ಬ್ಯಾಚಿನ ಎಲ್ಲಾವಿದ್ಯಾರ್ಥಿಗಳಿಗೆ ತಾತ್ಕಾಕಲಿಕಾ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲÀ ಡಾ.ಎಸ್ ಬಿ ವನಕುದರೆ ಅಧ್ಯಕ್ಷತೆವಹಿಸಿದ್ದರು.
ಡೀನ ಸ್ಟೂಡಂಟ್ ವೆಲ್ ಫೇರ್, ಡಾ.ಕೆ.ಗೋಪಿನಥ್, ಡೀನ್ ಅಕ್ಯಾಡೆಮಿಕ ಪೆÇ್ರೀಗ್ರಾಮ್ ಮತ್ತು ಅರ್ ಡಿ ಡಾ.ಅರ್.ಎಲ್.ಚಕ್ರಸಾಲಿ ಮತ್ತುಕಂಟ್ರೋಲರ್‍ಅಫ್‍ಎಕ್ಜಾಮಿನೇಶನ್ ದಿನೇಶ ಬಳ್ಳುಳ್ಳಯ್ಯಾ, ಹಾಗೂ ಸಮಾರಂಭದ ಸಂಯೋಜಕ ಡಾ.ಮಹೇಶ ವಂಜೇರಿ ಮತ್ತು ಪೆÇ್ರೀಫಸರ್ ಭಾರತಿ ಸುನಗಾರ ಉಪಸ್ಥಿತರಿದ್ದರು. ಎಂ.ಬಿ.ಎ ವಿಭಾಗದ ಮುಖ್ಯಸ್ಥ ಡಾ.ಪ್ರಶಾಂತ, ಸ್ವಾಗತಿಸಿದರು. ಡಾ. ಮಹೇಶ ವಂದಿಸಿದರು.

loading...