ಹುಬ್ಬಳಿ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿದ : ಗೃಹ ಸಚಿವ ಡಾ.ಜಿ.ಪರಮೇಶ್ವರ

0
0
loading...

ಕನ್ನಡಮ್ಮ ಸುದ್ದಿ -ಹುಬ್ಬಳಿ : ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿ, ಠಾಣೆಯ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಚಿವರು ಠಾಣೆಯ ಕಾನ್ಸಟೇಬಲ್ ಗಳ ದಿನಚರಿ ಪುಸ್ತಕ ವೀಕ್ಷಿಸಿದರು. ಠಾಣೆಯಲ್ಲಿನ ದಾಖಲೆಗಳನ್ನು ಪರಾಮರ್ಶನೆ ಮಾಡಿ, ಬೀಟ್ ಬುಕ್, ಎಸ್ ಸಿ , ಎಸ್ ಟಿ ಸಭೆ ನಡೆಸಿದ ಪುಸ್ತಕ, ಕಂಪ್ಯೂಟರ್ ನಲ್ಲಿಯ ನ್ಯಾಷನಲ್ ಸ್ಟೇಟ್ ತನಿಖೆಗಳ ಬಗ್ಗೆ ವಿಚಾರಿಸಿದರು. ಇಲಾಖೆ ಠಾಣೆಗೆ ನೀಡಿದ ಯಂತ್ರೋಪಕರಣಗಳು ಸಮರ್ಪಕ ರೀತಿಯಲ್ಲಿ ಕಾಯ೯ನಿವ೯ಹಿಸುತ್ತಿವೆಯೋ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದರು.

loading...