ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆಯಿಂದ ದಸರಾ ಉತ್ಸವ

0
0
loading...

ಬಾಗಲಕೋಟ: ನಗರದ ವಿದ್ಯಾಗಿರಿಯ ಹೇಮರಡ್ಡಿ ಮಲ್ಲಮ್ಮ ಸೇವಾ ಸಂಸ್ಥೆಯ ವತಿಯಿಂದ ದಸರಾ ಹಬ್ಬದ ಅಂಗವಾಗಿ ಮಂಗಳವಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ನಂದೀಶ್ವರ ಬಡಾವಣೆಯಲ್ಲಿರುವ ರಡ್ಡಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರ ಮೂರ್ತಿಗಳಿಗೆ ಅಭಿಷೇಕ ಮಾಡಲಾಯಿತು. ನಂತರ ದೇವಿ ಮೂರ್ತಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಸಾಯಂಕಾಲ ಸಿಕ್ಕೇರಿ ಕ್ರಾಸ್‍ನ ಮಾತೋಶ್ರೀ ಗೀತಾ ಮಾತೆಯವರಿಂದ ದೇವಿ ಪುರಾಣ ನಡೆಯಿತು. ಈ ಎಲ್ಲ ಕಾರ್ಯಕ್ರಮಗಳಲ್ಲೂ ಸಂಸ್ಥೆಯ ಅಧ್ಯಕ್ಷ ಸಿ.ಕೆ.ಒಂಟಗೋಡಿ, ಉಪಾಧ್ಯಕ್ಷರಾದ ನಿಂಗನಗೌಡ ಪಾಟೀಲ, ವೀಣಾ ಬೇವೂರ, ಕಾರ್ಯದರ್ಶಿ ಎಂ.ಆರ್.ನಾಗನೂರ, ಸಹಕಾರ್ಯದರ್ಶಿ ಎಸ್.ಆರ್.ಬದ್ನೂರ, ಸಂಘಟನಾ ಕಾರ್ಯದರ್ಶಿ ದೀಪಾ ನಾಯಕ, ನಿರ್ದೇಶಕರಾದ ಸವಿತಾ ಲೆಂಕೆನ್ನವರ, ಗಂಗೂ ಬಾಳಕ್ಕನವರ, ಮಾಲಾ ನಾಲತ್ತವಾಡ, ಶಾಂತಾ ಗಂಗರಡ್ಡಿ, ಸಂಜೀವರಡ್ಡಿ ಸತರಡ್ಡಿ ಸೇರಿದಂತೆ ಸಂಸ್ಥೆಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

loading...