R S S ಪಥಸಂಚಲನ

0
0
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ವಿಜಯ ದಶಮಿ ನಿಮಿತ್ತ ಅಂಗವಾಗಿ ರಾಷ್ಟಿಯ ಸೇವಾ ಸಂಘದ ವತಿಯಿಂದ ನಗರದಲ್ಲಿ ಗಣವೇಷದಾರಿ ಪಥ ಸಂಚಲನ ರವಿವಾರ ನಡೆಸಿದರು.ಪಥಸಂಚಲನ ಲಿಂಗರಾಜ ಕಾಲೇಜ್ ದಿಂದ ಪ್ರಾರಂಭವಾಗಿ ಗೊಂಧಳಿ ಗಲ್ಲಿ, ಕಂಗ್ರಾಳ ಗಲ್ಲಿ,ಕಾಕತಿವೇಸ್, ಶನಿವಾರ ಕೂಟ, ಗಣಪತಗಲ್ಲಿ, ನರಗುಂದಕರ ಬಾವೆ ಚೌಕ್, ಶನಿವಾರ ಮಂದಿರ ಮಾರ್ಗ, ಕುಲಕರ್ಣಿ ಗಲ್ಲಿ, ಟಿಳಕಚೌಕ, ರಾಮಲಿಂಗ ಖಿಂಡಗಲ್ಲಿ, ಜತ್ತಿ ಮಠ, ಕಿರ್ಲೋಸ್ಕರ ರಸ್ತೆ, ರಾಮದೇವ ಗಲ್ಲಿ, ಸಂಯುಕ್ತ ಮಹಾರಾಷ್ಟç ಚೌಕ್, ನಾರ್ವೇಕರಗಲ್ಲಿ, ಗವಳಿ ಗಲ್ಲಿ ಮೂಲಕ ಕಾಲೇಜ್‌ಗೆ ತಲುಪಿತು.ಶಾಸಕ ಅನಿಲ ಬೆನೆಕೆ, ಮಾಜಿ ಶಾಸಕ ಸಂಜಯ ಪಾಟೀಲ ಸೇರಿದಂತೆ ಗಣ್ಯರು, ಹೆಚ್ಚಿನ ಸಂಖ್ಯೆಯಲ್ಲಿ ಆರ್‌ಎಸ್‌ಎಸ್ ಸದಸ್ಯರು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.

loading...