ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ: ಶೌಚಾಲಯವಿಲ್ಲದೆ ಮಹಿಳೆಯರ ಪರದಾಟ

0
0
loading...

 

ಯೂನುಸ್ ಮೂಲಿಮನಿ
ನಾಲತವಾಡ: ಬಯಲು ಬಹಿರ್ದೆಸೆಗೆ ಬೇಸತ್ತ ಮಹಿಳೆಯರು, ಕಂಡು ಕಾಣದಂತೆ ವರ್ತಿಸುತ್ತಿರುವ ಜನಪ್ರತಿನಿಧಿಗಳು. ಪಟ್ಟಣದ ಒಂದನೇ ವಾರ್ಡ ಜಗದೇವನಗರದಲ್ಲಿ ಮಹಿಳೆಯರು ಬಯಲು ಬಹಿರ್ದೆಸೆ ಹೋಗುತಿದ್ದರು ಪಟ್ಟಣ ಪಂಚಾಯತ ಅಧಿಕಾರಿಗಳಾಗಲಿ, ವಾರ್ಡಿನ ಸದಸ್ಯರಾಗಲಿ, ಶಾಸಕರಾಗಲಿ ಇವರ ಗೋಳನ್ನು ಕೇಳಲು ಮುಂದಾಗುತ್ತಿಲ್ಲ, ಯುವತಿಯರು ವೃದ್ದರು, ಮಹಿಳೆಯರು ಬಹಿರ್ದೆಸೆ ಹೊಗುವ ಅನಿವಾರ್ಯವಾಗಿದೆ.

ಪ್ರತಿ ನಿತ್ಯ ಮಹಿಳೆಯರು ಬಹಿರ್ದೆಸೆ ಹೋಗಬೇಕಾದರೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕಿ ಹೋಗುತಿದ್ದಾರೆ.
ಕುಸಿದ ಬಿದ್ದ ಸಾರ್ವಜನಿಕ ಶೌಚಾಲಯ: ಹಿಂದೆ ಗ್ರಾ.ಪಂ ಇದ್ದಾಗ ತಾಳಿಕೋಟೆ ಮುಖ್ಯ ರಸ್ತಯ ಪಕ್ಕದಲ್ಲಿ ಸಾರ್ವಜನಿಕರ ಶೌಚಾಲಯ ನಿರ್ಮಾಣ ಮಾಡಿ ಮಹಿಳೆಯರಿಗೆ ತಕ್ಕ ಮಟ್ಟಿಗೆ ಅನಕೂಲ ಮಾಡಿದ್ದರು ಆದರೆ ಕೆಲವು ದಿನಗಳ ನಂತರ ಅದು ಕುಸಿದ ಬಿದ್ದಿತು, ಶೌಚಾಲಯ ಕುಸಿದ ಬಿದ್ದು ಸುಮಾರು 2 ವರ್ಷ ಗತಿಸಿದರು ಇದನ್ನು ದುರಸ್ತಿ ಮಾಡಲು ಪಟ್ಟಣ ಪಂಚಾಯತ ಅಧಿಕಾರಿಯಾಗಲಿ ಆಡಳಿತ ಮಂಡಳಿಯಾಗಲಿ ಮುಂದಾಗಿಲ್ಲ ಪಟ್ಟಣ ಪಂಚಾಯತ ಅಧಿಕಾರಿಯ ಬೇಜವಾಬ್ದಾರಿಯಿಂದ ಮಹಿಳೆಯರು ಬಯಲು ಬಹಿರ್ದೆಸೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣ ಪಂಚಾಯತ ಅಧಿಕಾರಿ ನಿಸ್ಕಾಳಜಿ: ಮಹಾತ್ಮ ಗಾಂಧಿಜಿಯವರ ಸ್ವಚ್ಚತಾ ಪರಿಕಲ್ಪನೆಯ ಹೆಜ್ಜೆ ಗುರುತುಗಳಲ್ಲಿ ಸಾಗಿ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಚ ಭಾರತ್ ಯೋಜನೆಯ ಆಶಯಗಳೊಂದಿಗೆ 2018ರ ಅಕ್ಟೋಬರ ವೇಳೆಗೆ ಕರ್ನಾಟಕವನ್ನು ಸಂಪೂರ್ಣವಾಗಿ ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿ ಮಾಡಲು ರಾಜ್ಯ ಸರ್ಕಾರ ಶೇ.90 ರಷ್ಟು ಪ್ರಗತಿ ಸಾಧಿಸಿದೆ, ಆದರೆ ಉತ್ತರ ಕರ್ನಾಟಕ ಭಾಗದ ಕೆಲವು ಜಿಲ್ಲೆಗಳು ಪ್ರಗತಿ ಸಾಧಿಸಿಲ್ಲ ಎಂದು ವರದಿ ಹೇಳುತ್ತದೆ. ಬಹುಷ ಇಂತಹ ಬೇಜವಾಬ್ದಾರಿ ಅಧಿಕಾರಿಗಳು ಇರುವದರಿಂದಲೆ ಬಯಲು ಬಹಿರ್ದೆಸೆ ಮುಕ್ತ ರಾಜ್ಯವಾಗುತ್ತಿಲ್ಲ, ಪಟ್ಟಣದಲ್ಲಿ ಬಹುತೇಕ ಬಯಲು ಬಹಿರ್ದೆಸೆಗೆ ಸಾರ್ವಜನಿಕರು ಹೆಚ್ಚು ಮುಖ ಮಾಡುತಿದ್ದಾರೆ, ಯಾಕೆಂದರೆ ಅವರಿಗೆ ಸೂಕ್ತ ಶೌಚಾಲಯಗಳ ವ್ಯವಸ್ಥೆಯಿಲ್ಲ, ವೈಯಕ್ತಿಕ ಶೌಚಾಲಯ ನಿರ್ಮಾನಕ್ಕೆ ಸರ್ಕಾರ ಸಾಕಷ್ಟು ಅನುದಾನ ನೀಡುತಿದ್ದರು ಪ.ಪಂ ಬೇಜವಾಬ್ದಾರಿ ಅಧಿಕಾರಿಯಿಂದ ಇನ್ನು ಬಯಲು ಬಹಿರ್ದೆಸೆ ಪಟ್ಟಣವಾಗಿಲ್ಲ.
ಕಾಮಗಾರಿ ವಿಳಂಬ: ಪ.ಪಂ ವತಿಯಿಂದ ಸ್ಥಳ ಇದ್ದ 18 ಜನರಿಗೆ ವೈಯಕ್ತಿಕ ಶೌಚಾಲಯದ ಕ್ರೀಯಾ ಯೋಜನೆ ರೂಪಿಸಿ ಶೌಚಾಲಯದ ನಿರ್ಮಾಣಕ್ಕೆ ಗುತ್ತಿಗೆ ನಿಡಿದ್ದರು ಕಾಮಗಾರಿಗೆ ಮುಂದಾಗ ಗುತ್ತಿಗೆದಾರ ಕಾಮಗಾರಿಯಲ್ಲಿ ವಿಳಂಬ ನೀತಿ ಅನುಸರಿಸುತಿದ್ದಾನೆ, ಶೌಚಾಲಯ ಗುಂಡಿಗಳನ್ನು ತೊಡದೆ ಕೇವಲ ಸೀಮೆಂಟನಿಂದ ತಯಾರಾದ ಶೌಚಾಲಯ ಬಾಕ್ಸ ತಂದು ಮನೆ ಮುಂದೆ ಇಟ್ಟಿದ್ದಾನೆ ಮತ್ತೆ ಈ ಕಡೆ ಹಿಂತುರಗಿ ಸಹ ನೋಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣಕ್ಕೆ ಶಾಸಕರ ನಿರ್ಲಕ್ಷ್ಯ: ಪಟ್ಟಣ ಪಂಚಾಯತಗೆ ಕೋಟಿ ಗಟ್ಟೆಲೆ ಹಣ ಬರುತ್ತಿದ್ದು ಆದರೆ ಅದನ್ನು ಸಮರ್ಪಕ ಬಳಸದೆ ಕಾಲ ಹರಣ ಮಾಡುತ್ತಿರವು ಮುಖ್ಯಾಧಿಕಾರಿ ವಿರುದ್ದ ಕ್ರಮ ಜರುಗಿಸಬೇಕಿದ್ದ ಶಾಸಕರು ನನಗೆ ಈ ಪಟ್ಟಣ ಸಂಭಂದವಿಲ್ಲದಂತೆ ವರ್ತಿಸುತಿದ್ದಾರೆ, ಚುನಾವಣೆಯಲ್ಲಿ ಬಂದ ಶಾಸಕರು ಮತ್ತೆ ಪಟ್ಟಣದ ಕಡೆ ಹಿಂದುರಗಿ ನೋಡಿಲ್ಲ, ಪಟ್ಟಣದ ಅಭಿವೃದ್ಧಿ ಕುಂಟಿತಗೊಳ್ಳುತಿದ್ದರು, ಒಂದು ಬಾರಿಯು ಪ್ರಗತಿ ಪರಿಶೀಲನೆ ಸಭೆ ಮಾಡಿಲ್ಲ, ಬಹುಷ ಚುನಾವಣೆಯಲ್ಲಿ ಮಾತ್ರ ಪಟ್ಟಣದ ನೆನಪು ಶಾಸಕರಿಗೆ ಅಗುತ್ತೆ ಎಂದು ಅನಿಸುತ್ತಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತಿದ್ದಾರೆ.

loading...