ಅಪ್ಪುಗೋಳ ಬಂಧಿಸುವಂತೆ ಗ್ರಾಹಕರ ಪ್ರತಿಭಟನೆ: ಪೋಲಿಸರ ವಿರುದ್ದ ಆಕ್ರೋಶ

0
0
loading...

ಬಹು ಕೋಟಿ ರೂ ಗ್ರಾಹಕರ ಹಣ ವಂಚನೆ ಪ್ರಕರಣ ಆರೋಪಿ ಸಂಗೊಳ್ಳಿ ರಾಯಣ್ಣ ಬ್ಯಾಂಕಿನ ಅದ್ಯಕ್ಷ ಆನಂದ ಅಪ್ಪುಗೋಳ ಬಂಧಿಸಿ ಠೇವಣಿ ಹಣ ವಾಪಸ ನೀಡುವಂತೆ ಆಗ್ರಹಿಸಿ ಬ್ಯಾಂಕಿನ ಠೇವಣಿದಾರರು ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು .ಇಂದು ಪ್ರತಿಭಟನೆ ನಡೆಸಿದ ಠೇವಣಿ ಇಟ್ಟ ಗ್ರಾಹಕರು ಆನಂದ ಅಪ್ಪುಗೋಳ ಮೇಲೆ ಜಾಮೀನು ರಹಿತ ಬಂಧನ ವಾರಂಟ್ ಇದ್ದರು ಪೊಲೀಸ್ ಇಲಾಖೆ ಬಂಧಿಸುತ್ತಿಲ್ಲ ಎಂದು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಆನಂದ ಅಪ್ಪುಗೋಳ ಜೊತೆಯಲ್ಲಿ ಪೋಲಿಸರು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.ಕೂಡಲೆ ಆನಂದ ಅಪ್ಪುಗೋಳ ಬಂಧಿಸಿ ನ್ಯಾಯ ಕೊಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು .

loading...