ಅಮೀನಗಡ: ಸಂಭ್ರಮದ ದೀಪಾವಳಿ

0
0
loading...

ಅಮೀನಗಡ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ದೀಪಗಳ ಹಬ್ಬದ ದೀಪಾವಳಿಯನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.
ದೀಪಾವಳಿ ಹಬ್ಬದ ಲಕ್ಷಿö್ಮÃ ಪೂಜೆಗೆಂದು ಮಂಗಳವಾರ ಸಂಜೆಯಿಂದಲೇ ಜನತೆ ಪೂಜೆ ಸಾಮಗ್ರಿ ಖರೀದಿಯಲ್ಲಿ ತೊಡಗಿದ್ದರು. ಪೂಜೆಗೆಂದು ಬಾಳೆಕಂಬ, ಕಬ್ಬು, ಚೆಂಡು ಹೂವು, ನಾನಾ ರೀತಿಯ ಹಣ್ಣು ಮಾರಾಟ ಜೋರಾಗಿತ್ತು. ರಾಜ್ಯ ಹೆದ್ದಾರಿ ಇಕ್ಕೆಲದಲ್ಲಿ ವ್ಯಾಪಾರ ಜೋರಾಗಿದ್ದರಿಂದ ಮಂಗಳವಾರ ಸಂಜೆಯಿಂದ ಬುಧವಾರ ಮಧ್ಯಾಹ್ನದವರೆಗೆ ಜನಜಂಗುಳಿ ಹೆಚ್ಚಾಗಿತ್ತು. ಬುಧವಾರ ಸಂಜೆ ಲಕ್ಷಿö್ಮದೇವಿ ಪೂಜೆ ಎಲ್ಲೆಡೆ ಭಕ್ತಿ ಭಾವವಿಂದ ನಡೆಯಿತು. ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಅಲಂಕರಿಸಿ ಗ್ರಾಹಕರನ್ನು ಆಕರ್ಷಿಸುವಂತೆ ಮಾಡಿದ್ದವು.

ಅಮೀನಗಡ, ಹುಲಗಿನಾಳ, ರಕ್ಕಸಗಿ, ಕಮತಗಿ, ಸೂಳೇಭಾವಿ, ಕೆಲೂರ, ಗುಡೂರ (ಎಸ್‌ಸಿ) ಸೇರಿದಂತೆ ಸುತ್ತಲಿನ ಗ್ರಾಮಗಳ ಜನರಿಂದ ಪೂಜೆ ಸಾಮಗ್ರಿ ಖರೀದಿ ಜೋರಾಗಿತ್ತು. ರಾಯಚೂರು-ಬೆಳಗಾವಿ ರಾಜ್ಯ ಹೆದ್ದಾರಿಯಲ್ಲೆÃ ವ್ಯಾಪಾರ ವಹಿವಾಟು ಜೋರಾಗಿ ಸಾಗಿದ್ದರಿಂದ ಮಂಗಳವಾರ ಸಂಜೆಯಿಂದ ಬುಧವಾರ ಮಧ್ಯಾಹ್ನದವರೆಗೆ ಸಂಚಾರ ಅಸ್ತವ್ಯಸ್ತವಾಗಿತ್ತು. ಸೂಕ್ತ ಬಂದೋಬಸ್ತ್ ವ್ಯವಸ್ಥೆ ಇಲ್ಲದೆ ವಾಹನ ಸವಾರರು ಹೈರಾಣಾದರು. ಬುಧವಾರ ಬೆಳಗ್ಗೆ ಅಪಾರ ಪ್ರಮಾಣದಲ್ಲಿನ ಟ್ರಾಫಿಕ್ ಜಾಮ್‌ನಿಂದಾಗಿ ಮೂವರು ಸವಾರರಿಗೆ ಸಣ್ಣ ಪÅಟ್ಟ ಗಾಯಗಳಾದವು. ರಸ್ತೆಯಲ್ಲೆÃ ಸಾಗುತ್ತಿದ್ದ ಹುನಗುಂದ ತಹಸೀಲ್ದಾರ ಎಸ್.ಎಸ್.ಸಂಪಗಾವಿ ಟ್ರಾಫಿಕ್ ಕಿರಿಕಿರಿಗೆ ಬೇಸತ್ತು ಸ್ಥಳೀಯ ಪೆÇಲೀಸರಿಗೆ ಸಂಚಾರ ವ್ಯವಸ್ಥೆ ಸರಿಪಡಿಸುವಂತೆ ಸೂಚಿಸಿದರು ಎಂದು ಸ್ಥಳೀಯರು ತಿಳಿಸಿದರು. ಮಾರುಕಟ್ಟೆಯಲ್ಲಿ ಹೂವು, ಹಣ್ಣುö, ಬಾಳೆಕಂಬ, ಕಬ್ಬು ಸೇರಿದಂತೆ ಬಹುತೇಕ ವಸ್ತುಗಳ ಬೆಲೆ ಗಗನಕ್ಕೆÃರಿತ್ತುö. ಇಲ್ಲಿನ ಮಾರುಕಟ್ಟೆ ಪ್ರತಿ ವಾರವೂ ರಾಜ್ಯ ಹೆದ್ದಾರಿ ಪಕ್ಕದಲ್ಲೆÃ ನಡೆಯುತ್ತಿರುವುದರಿಂದ ಈ ರೀತಿ ಅವಘಡ ಪ್ರತಿವಾರ ನಡೆದೇ ಇರುತ್ತದೆ. ದೀಪಾವಳಿಯಲ್ಲಂತೂ ವ್ಯಾಪಾರ ಭರಾಟೆ ಹೆಚ್ಚಾಗಿದ್ದರಿಂದ ವ್ಯಾಪಾರಸ್ಥರು, ವಾಹನ ಸವಾರರು, ಸಾರ್ವಜನಿಕರು ಮತ್ತಷ್ಟು ಪರದಾಡುವಂತಾಯಿತು.

loading...