ಅರ್ಥಪೂರ್ಣ ಟಿಪ್ಪು ಜಯಂತಿ ಆಚರಣೆ : ಡಿಸಿ ಶಾಂತಾರಾಮ

0
0
loading...

ಬಾಗಲಕೋಟೆ: ಕಳೆದ ಎರಡು ವರ್ಷಗಳಿಂದ ಸರಕಾರದ ವತಿಯಿಂದ ಆಚರಿಸುತ್ತಾ ಬಂದಿರುವ ಟಿಪ್ಪು ಜಯಂತಿಯನ್ನು ನವೆಂಬರ 10 ರಂದು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ಸನ್ನದ್ದವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣಲ್ಲಿಂದು ಟಿಪ್ಪು ಜಯಂತಿ ಆಚರಣೆ ಕುರಿತಂತೆ ಜರುಗಿ ಶಾಂತತಾ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಹಾನ್ ವ್ಯಕ್ತಿಗಳು, ಸಂತರು, ಶರಣರು, ಸೂಫಿಗಳು ಯಾವುದೇ ಜಾತಿ ಮತಕ್ಕೆ ಸೀಮಿತರಲ್ಲ. ಅವರು ನಾಡಿಗೆ ನೀಡಿದ ಕೊಡುಗೆ, ಸಾಧನೆ ಅವುಗಳನ್ನು ಮುಂದಿನ ಪೀಳಿಗೆ ಅನುಕರಿಸಲಿ ಎಂಬ ಉದ್ದೇಶದಿಂದ ಸರಕಾರ ಇಂತಹ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ ಎಂದರು.

ಜಿಲ್ಲಾಡಳಿತದ ವತಿಯಿಂದ ಆಡಿಟೋರಿಯಂ ಹಾಲ್‍ನಲ್ಲಿ ಟಿಪ್ಪು ಜಯಂತಿಯನ್ನು ಸಂಭ್ರಮದಿಂದ ನಡೆಸಲಾಗುವುದು. ಪ್ರತಿ ವರ್ಷದಂತೆ ಟಿಪ್ಪು ಜಯಂತಿ ಆಚರಿಸಲಾಗುತ್ತಿದ್ದು, ಇನ್ನಷ್ಟು ಈ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಸಭೆಯಲ್ಲಿ ಮುಕ್ತವಾಗಿ ಚರ್ಚಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ನ್ಯಾಯಾಲಯದ ಆದೇಶದಂತೆ ಮೆರವಣಿಗೆ, ರ್ಯಾಲಿ ಮುಂತಾದವುಗಳನ್ನು ನಿಷೇಧಿಸಿರುವದರಿಂದ ಅಂತವುಗಳಿಗೆ ಅವಕಾಶ ನೀಡದೇ ಅರ್ಥ ಪೂರ್ಣ ಜಯಂತಿಗೆ ಅವಶ್ಯವಿರುವ ಸಲಹೆ, ಸೂಚನೆಗಳನ್ನು ನೀಡಬೇಕು ಎಂದರು. ಸಮಾಜದ ಮುಖಂಡರಾದ ಎ.ಎ.ದಾಂಡೀಯಾ, ಕುತುಬುದ್ದಿನ ಖಾಜಿ, ಎಂ.ಎಂ.ನಬಿವಾಲೆ ಮಾತನಾಡಿ ಟಿಪ್ಪು ಜಯಂತಿ ಆಚರಣೆಯಲ್ಲಿ ಟಿಪ್ಪು ಕುರಿತಾದ ಸಮಗ್ರ ಅಧ್ಯಯನ ಮಾಡಿದ ಉಪನ್ಯಾಸಕರನ್ನು ಕರೆಯಿಸಬೇಕು. ಪ್ರತಿಭಾರಿ ಅಂಬೇಡ್ಕರ ಭವನದಲ್ಲಿ ಆಚರಿಸಲಾಗುತ್ತಿದ್ದು, ಅದರ ಬದಲಾಗಿ ಕಲಾಭವನದಲ್ಲಿ ಕಾರ್ಯಕ್ರಮ ಆಯೋಜಿಸಬೇಕೆಂದು ಸಭೆಗೆ ಮನವಿ ಮಾಡಿಕೊಂಡರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಮಾತನಾಡಿ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಲು ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುವುದು. ಬಂದಂತಹ ಜನತೆಗೆ ಅಲ್ಪೋಹಾರದ ವ್ಯವಸ್ಥೆ ಮಾಡಲಾಗುವುದೆಂದರು. ಸಭೆಯಲ್ಲಿ ಸಮಾಜದ ಮುಖಂಡರಾದ ಡಾ.ವಾಯ್.ಎಸ್.ಪಠಾಣ, ಆರ್.ಡಿ.ಬಾಬು, ಸಲಿಂ ಮೊಮಿನ್, ಅಮರ ಪುಣೆಕರ, ಡಿ.ವಾಯ್.ಎಸ್.ಪಿ ಗಿರೀಶ, ಸಿಪಿಐ ಶ್ರೀಕಾಂತ ಗಾಬಿ, ಪಿಎಸ್‍ಐ ಸಂತೋಷ ಹಳ್ಳೂರ, ಶಿವಾನಂದ ಮುಖರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...