ಅವಧಿಗೆ ಮುನ್ನ ಸಬ್ ರಜಿಸ್ಟರ್ ವರ್ಗಾವಣೆ ಮಾಡದಂತೆ ಮನವಿ

0
1
ಅವಧಿಗೆ ಮುನ್ನ ಸಬ್ ರಜಿಸ್ಟರ್ ವರ್ಗಾವಣೆ ಮಾಡದಂತೆ ಮನವಿ
ಕನ್ನಡಮ್ಮ ಸುದ್ದಿ-ಬೆಳಗಾವಿ :ನಗರದ ಸಬ್ ರಜಿಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವಿಷ್ಣುತೀರ್ಥರನ್ನು ಅವಧಿಗೆ ಮುನ್ನವೆ ಸರಕಾರ ವರ್ಗಾವಣೆ ಮಾಡಿರುವ ಕ್ರಮ ಖಂಡಿಸಿ ನಗರದ ವಕೀಲರ ಸಂಘದಿಂದ ವರ್ಗಾವಣೆ ಮಾಡದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸೋಮವಾರ ಮನವಿ ಸಲ್ಲಿಸಿದ ಅವರು ಬೆಳಗಾವಿ ಉಪ ನೊಂದಾಣಾಧಿಕಾರಿ ಕಚೇರಿ ರಾಜ್ಯದಲ್ಲಿಯೇ ಅತಿ ಹೆಚ್ಚು ಕಂದಾಯ ಆದಾಯ ತಂದು ಕೊಡುತ್ತದೆ. ನಗರದ ಸಬ್ ರಜಿಸ್ಟರ್ ಕಚೇರಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದೆ.ಸಿಬ್ಬಂದಿ ಕೊರತೆಯೂಯಿದೆ.ಇಂತಹ ಸಂದರ್ಭದಲ್ಲಿ ಕಳೆದ ಮೂರು ತಿಂಗಳ ಹಿಂದೆ ಸೇವೆಗೆ ಹಾಜರಾದ ಸಬ್ ರಜಿಸ್ಟರ ವಿಷ್ಣುತೀರ್ಥ ಅವರನ್ನು ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ವಿಷ್ಣುತೀಥ್ರನ್ನು ವರ್ಗಾವಣೆ ಮಾಡಿದ್ದು ಸರಿಯಲ್ಲ ,ಕೂಡಲೇ ವರ್ಗಾವಣೆ ಆದೇಶವನ್ನು ಹಿಂಪಡೆಯಬೇಕು ಎಂದು ಮನವಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್,ಎಸ್,ಕಿವಡಸನ್ನವರ,ಉಪಾಧ್ಯಕ್ಷ ಮುರೇಂದ್ರಗೌಡ ಪಾಟೀಲ,ಹನುಮಂತ ಕೊಂಗಲಿ ಸೇರಿದಂತೆ ಇತರರು ಇದ್ದರು.
loading...