ಉಪಚುನಾವಣೆಯಲ್ಲಿ ಜೆಡಿಎಸ್ ಗೆಲುವು ; ಕಾರ್ಯಕರ್ತರಿಂದ ಸಂಭ್ರಮಾಚಾರಣೆ

0
0
loading...

ಉಪಚುನಾವಣೆಯಲ್ಲಿ ಜೆಡಿಎಸ್ ಗೆಲುವು ; ಕಾರ್ಯಕರ್ತರಿಂದ ಸಂಭ್ರಮಾಚಾರಣೆ

ಕನ್ನಡಮ್ಮ ಸುದ್ದಿ- ಬೆಳಗಾವಿ: ರಾಜ್ಯದಲ್ಲಿ ಅಧಿಕಾರಾರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ಸ್ಪಷ್ಟ ಮುನ್ನಡೆ ಸಾಧಿಸಿದ ಹಿನ್ನಲೆ ಬೆಳಗಾವಿ ಜೆಡಿಎಸ್‌ ಕಾರ್ಯಕರ್ತರು ನಗರದ ಚನ್ನಮ್ಮ ವೃತ್ತದಲ್ಲಿ ಸಂಭ್ರಮ ಆಚರಣೆ ಮಾಡಿದರು.

ದೇಶದ ಗಮನ ಸೆಳೆದಿದ್ದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಹೊರಬರುತ್ತಿದ್ದು, ರಾಮನಗರ ವಿಧಾನ ಸಭೆ ಕ್ಷೇತ್ರ ಜೆಡಿಎಸ್ ಸ್ಪರ್ಧಿ ಅನೀತಾ ಕುಮಾರಸ್ವಾಮೀ ಹಾಗೂ ಮಡ್ಯ ಲೋಕಸಭಾ ಕ್ಷೇತ್ರದಲ್ಲಿ ಶಿವರಾಮೇಗೌಡರಿಗೆ ಗೆಲುವು ಪಡೆದಿರುವುದಕ್ಕೆ ವಿಜಯೋತ್ಸವ ಆಚರಣೆ‌ ಮಾಡಿದರು.

ಈ ಸಂದರ್ಭದಲ್ಲಿ ಬಿ.ಎಸ್ ರುದ್ರಗೌಡರು ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.

loading...