ಕಬ್ಬು ಬೆಳೆಗಾರನಿಗೆ ಬ್ಯಾಂಕ್‍ನಿಂದ ಕೋರ್ಟ್ ಸಮನ್ಸ್

0
13
loading...

ಬೆಂಗಳೂರು: ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಮುಧೋಳ ಕಬ್ಬು ಬೆಳೆಗಾರನಿಗೆ ಬ್ಯಾಂಕ್‍ನಿಂದ ಕೋರ್ಟ್ ಸಮನ್ಸ್ ಜಾರಿ ಮಾಡಿರುವುದು ಬೆಳಕಿಗೆ ಬಂದಿದೆ.
ಮುಧೋಳ ತಾಲೂಕಿನ ಹಲಗಲಿ ಗ್ರಾಮದ ರೈತ ರವಿಶಂಕರ ವೆಂಕಪ್ಪ ಕುಸಗಲ್‍ಗೆ ಸಾಲ ಮರು ಪಾವತಿಸಬೇಕು ಎಂದು ಸಮನ್ಸ್ ಜಾರಿ ಮಾಡಲಾಗಿದೆ.ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.ಬೆಂಗಳೂರಿನ ಡೆಬೆಟ್ಸ ರಿಕವರಿ ಟ್ರಿಬುಲನ್‍ನಿಂದ ಸಮನ್ಸ್ ಜಾರಿ ಆಗಿದೆ.
ಮುಧೋಳ ತಾಲೂಕಿನ ಇಂಡಿಯನ್ ಬ್ಯಾಂಕ್‍ನಿಂದ ರೈತ ಬೆಳೆ ಸಾಲ ತೆಗೆದುಕೊಂಡಿದ್ದ.ಬ್ಯಾಂಕಿನ ಕಿರುಕುಳಕ್ಕೆ ಕಳೆದ ಆ.30ರಂದು ಮುಖ್ಯ ಮಂತ್ರಿ ಕುಮಾರಸ್ವಾಮಿಗೆ ರೈತ ಪತ್ರ ಬರೆದಿದ್ದ.ಈ ಹಿನ್ನೆಲೆ ಮುಖ್ಯಮಂತ್ರಿ ಸಚಿವಾಲಯದಿಂದ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಬಾಗಲ ಕೋಟೆ ಜಿಲ್ಲಾಧಿಕಾರಿಗೆ ಕಳೆದ ಅಕ್ಟೋಬರ್ 3ರಂದು ಪತ್ರ ರವಾನೆಯಾಗಿದೆ.
ನಾಲ್ಕು ವರ್ಷಗಳ ಹಿಂದೆ ಮುಧೋಳದ ರನ್ನ ಸಕ್ಕರೆ ಕಾರ್ಖಾನೆಗೆ ಸಾಗಿಸಿದ ಕಬ್ಬಿಗೆ ಕಡಿತ ಮಾಡಿದ್ದ ಹಣ ಇನ್ನೂ ಬಂದಿಲ್ಲ. ಹೀಗಾಗಿ ಸಾಲ ಕಟ್ಟಲು ಸಾಧ್ಯವಾಗದ ರೈತ ಕೈ ಚೆಲ್ಲಿ ಕುಳಿತುಕೊಂಡಿದ್ದ. ಇದರಿಂದ ಸಾಲ ಎಲ್ಲಿಂದ ಕಟ್ಟಲಿ ಎಂಬುದು ರೈತನ ಗೋಳಾಗಿದೆ.
ಕೊಳವೆ ಬಾವಿ ಬಂದ್ ಆಗಿದ್ದರಿಂದ 4 ವರ್ಷಗಳಿಂದ ಕಬ್ಬು ಬೆಳೆಯಲು ಆಗಿಲ್ಲ.2015ರಲ್ಲಿ ಕಬ್ಬು ಬೆಳೆ ಸಾಲ ಅಂತ 10ಲಕ್ಷ ರೂ. ಪೈಪ್‍ಲೈನ್‍ಗಾಗಿ ರೈತ 6 ಲಕ್ಷ ರೂ. ಸಾಲ ಪಡೆದಿದ್ದ. ರೈತರ ಜೊತೆ ಜಾಮೀನುದಾರರಿಗೂ ಬ್ಯಾಂಕಿನಿಂದ ಸಮನ್ಸ್ ಜಾರಿ ಮಾಡಲಾಗಿದೆ. ಸರ್ಕಾರದ ಸಾಲ ಮನ್ನಾ ಲಾಭವೂ ತಟ್ಟಿಲ್ಲ. ಬ್ಯಾಂಕಿನಿಂದ ಕಿರುಕುಳವು ನಿಂತಿಲ್ಲ ಎಂದು ರೈತ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಅಲ್ಲಿ ಸಿಎಂ ಬ್ಯಾಂಕಿನವರಿಗೆ ನೋಟಿಸ್ ನೀಡದಂತೆ ಹೇಳಿದ್ದೇನೆ ಅಂತಾರೆ.ಇಲ್ಲಿ ಬ್ಯಾಂಕಿನವರು ಅದಕ್ಕೆ ಕಿವಿಗೊಡದೇ ನೋಟಿಸ್ ಮೇಲೆ ನೋಟಿಸ್ ಕೊಡುತ್ತಲೇ ಇದ್ದಾರೆ. ಸಚಿವಾಲಯದಿಂದ ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಬಂದರೂ ಜಿಲ್ಲಾಡಳಿತ ಯಾವುದೇ ಕ್ರಮ ಜರುಗಿಸಿಲ್ಲ ಎಂಬುದು ರೈತರ ಆರೋಪವಾಗಿದೆ.

loading...