ಕಾಲುವೆಗೆ ಬಿದ್ದ ಮಗ, ಚಿಕ್ಕಪ್ಪ ಸಾವು

0
0
loading...

ನಿಡಗುಂದಿ: ಸ್ನಾನಕ್ಕೆಂದು ಕಾಲುವೆಗೆ ಇಳಿದಾಗ ಆಯ ತಪ್ಪಿ ನೀರಲ್ಲಿ ಬಿದ್ದು ಇಬ್ಬರು ಮೃತ ಪಟ್ಟ ಘಟನೆ ಸಮೀಪದ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ನಡೆದಿದೆ.
ಪರಸಪ್ಪ ಲಕ್ಷ÷್ಮಣ ಇಂಗಳಗಿ(೨೦) ಹಾಗೂ ಶರಣಪ್ಪ ಪರಸಪ್ಪ ಇಂಗಳಗಿ(೨೯)ಮೃತಪಟ್ಟವರು. ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಕುನಬೆಂಚಿ ಗ್ರಾಮದವರಾದ ಮೃತರು, ಹುಲಜಂತಿ ಮಾಳಿಂಗರಾಯನ ಜಾತ್ರೆ ಮುಗಿಸಿ ಮರಳುವಾಗ ಈ ಘಟನೆ ನಡೆದಿದೆ.

ಈಜು ಬಾರದ ಪರಸಪ್ಪ ಆಯ ತಪ್ಪಿ ನೀರಲ್ಲಿ ಬಿದ್ದು ಮುಳುಗುತ್ತಿದ್ದಾಗ ಪರಸಪ್ಪನ ಚಿಕ್ಕಪ್ಪನಾದ ಶರಣಪ್ಪ ಈಜು ಬಾರದಿದ್ದರೂ ಪರಸಪ್ಪ ರಕ್ಷಣೆಗೆ ನೀರಿಗೆ ಧುಮುಕಿದ್ದಾನೆ. ಆಗ ಜೀವ ಭಯದಲ್ಲಿದ್ದ ಮಗ ಚಿಕ್ಕಪ್ಪನ್ನು ತಬ್ಬಿಕೊಂಡಿದ್ದಾನೆ. ನಂತರ ಇಬ್ಬರೂ ನೀರು ಪಾಲಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಾಲುವೆಯಲ್ಲಿ ಅಪಾರ ನೀರು ಹರಿಯುತ್ತಿದ್ದರಿಂದ ಶವ ಹುಡುಕಾಟಕ್ಕೆ ಅಸಾಧ್ಯವೆಂದ ಅರಿತು ಕಾಲುವೆಗೆ ನೀರು ಹರಿಯುವುದನ್ನು ಸ್ಥಗಿತಗೊಳಿಸಿ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಪಟ್ಟಣದ ಪೆÇಲೀಸರು ಶವ ಹುಡುಕಾಟ ಆರಂಭಿಸಿದ್ದಾರೆ.

loading...