ಕೊಲೆ: ಮೂವರು ಆರೋಪಿಗಳ ಬಂಧನ

0
1
loading...

ಆಲಮಟ್ಟಿ: ಯಲಗೂರದಲ್ಲಿ ನಡೆದ ರೇಣುಕಾಳ ಕೊಲೆ ಪ್ರಕರಣವನ್ನು ನಿಡಗುಂದಿ ಪೊಲೀಸರು ಬೇಧಿಸಿದ್ದು, ಕೊಲೆಯಾದ ಒಂದೂವರೆ ದಿನಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹತ್ಯೆಯ ಆರೋಪಿಗಳಾದ ಮೃತ ರೇಣುಕಾಳ ತಾಯಿ ಶಿವಲಿಂಗಮ್ಮ ಉರ್ಫ ಮಾರೆವ್ವ ಮಹಾದೇವಪ್ಪ ಪೂಜಾರಿ (೫೫), ರೇಣುಕಾಳ ಸಹೋದರ ಮಲ್ಲಿಕಾರ್ಜುನ ಪೂಜಾರಿ (೨೬), ರೇಣುಕಾಳ ತಂಗಿಯ ಗಂಡ ರಮೇಶ (೧೯) ಅವರನ್ನು ಬಂಧಿಸಲಾಗಿದೆ.
ವಿಜಯಪುರ ಎಸ್‌ಪಿ ರಿಷ್ವಂತ್, ಡಿವೈಎಸ್‌ಪಿ ಮಹೇಶ್ವರಗೌಡ ಮಾರ್ಗದರ್ಶನದಲ್ಲಿ ಬಸವನಬಾಗೇವಾಡಿ ಸಿಪಿಐ ಎಂ.ಎನ್. ಶಿರಹಟ್ಟಿ, ನಿಡಗುಂದಿ ಎಎಸ್‌ಐ ಎಂ.ಬಿ. ನಾಯ್ಕೊÃಡಿ ನೇತೃತ್ವದ ತನಿಖಾ ತಂಡ ಮೂವರನ್ನು ದಸ್ತಗೀರ ಮಾಡಿದೆ. ಮೂವರು ರಾಯಚೂರ ಜಿಲ್ಲೆ ಮಾನ್ವಿ ತಾಲ್ಲೂಕಿನ ಶಿರವಾರ ಗ್ರಾಮದವರು.
ಪ್ರಕರಣದಲ್ಲಿ ಕೃತ್ಯ ಎಸಗಿ ಪರಾರಿಯಾದ ಆರೋಪಿತರನ್ನು ಘಟನೆ ನಡೆದ ಒಂದೂವರೆ ದಿನದಲ್ಲಿ ತನಿಖಾ ತಂಡ ಬಂಧಿಸಿದ್ದಾರೆ, ತನಿಖಾ ತಂಡದ ಸದಸ್ಯರನ್ನು ಪೊಲೀಸ್ ವರಿಷ್ಠಾಧಿಕಾರಿ ರಿಷ್ವಂತ್ ಶ್ಲಾಘಿಸಿದ್ದಾರೆ.

loading...