ಕ್ಯಾಲಿಪೋರ್ನಿಯಾ ಬಾರ್ ನಲ್ಲಿ ಗುಂಡಿನ ದಾಳಿ

0
0
loading...

ಥೌಸಾಂಡ್  ಓಕ್ಸ್ : ದಕ್ಷಿಣ ಕ್ಯಾಲಿಪೋನಿರ್ಯಾದಲ್ಲಿರುವ ಬಾರ್ ಮತ್ತು ಡ್ಯಾನ್ಸ್ ಕ್ಲಬ್ ವೊಂದರಲ್ಲಿ  ಬಂದೂಕು ದಾರಿ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಿಂದ ಉಪ ಕಾನೂನು ಅಧಿಕಾರಿ ಸೇರಿದಂತೆ 12 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ರಾತ್ರಿ 11-20 ರ ಸುಮಾರಿನಲ್ಲಿ ಬಾರ್ಡರ್ ಲೈನ್ ಬಾರ್ ಮತ್ತು ಗ್ರೀಲ್ ನಲ್ಲಿ ಈ ದಾಳಿ ನಡೆದಿದೆ. ದಾಳಿ ವೇಳೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಯುವಕರೇ ತುಂಬಿದ್ದರು ಎಂದು ವೆಂಚೂರಾ ಕೌಂಟಿ ತನಿಖಾಧಿಕಾರಿ ಕುರೆದಿಜಿಯಾನ್ ತಿಳಿಸಿದ್ದಾರೆ.
ಈಗಲೂ ಕೂಡಾ ಈ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರೆದಿದೆ.ಬಂದೂಕು ದಾರಿ ವ್ಯಕ್ತಿಯನ್ನು ನೋಡಿದ್ದೇನೆ ಆದರೆ,.ಆತನನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ ಎಂದು ಕುರೆದಿಜಿಯಾನ್ ತಿಳಿಸಿದ್ದಾರೆ.
ನೂರಾರು ಜನರು ಸೇರಿದ್ದರು. ಉಪ ಕಾನೂನು ಅಧಿಕಾರಿ ಬಾರ್ ಒಳಗಡೆ ಬಂದ ನಂತರ ಗುಂಡಿನ ದಾಳಿ ನಡೆದಿದೆ ಎಂದು ಅವರು ಹೇಳಿದ್ದಾರೆ.
ಲಾಸ್ ಏಂಜಲೇಸ್ ನ ಪಶ್ಚಿಮ ಭಾಗದಲ್ಲಿರುವ ಥೌಸಾಂಡ್ ಓಕ್ಸ್  40 ಮೈಲಿ ವಿಸ್ತೀರ್ಣಹೊಂದಿದ್ದು, 1 ಲಕ್ಷದ 30 ಸಾವಿರ ಜನರಿದ್ದಾರೆ. ಕಳೆದ ಕೆಲ ದಿನಗಳಿಂದಲೂ ಇಲ್ಲಿ ಗುಂಡಿನ ದಾಳಿ ನಡೆದಿರಲಿಲ್ಲ.
ಗುಂಡಿನ ದಾಳಿ ನಡೆಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದಾಗ ಬಾರ್ ನ ಕಿಟಕಿಗಳ ಮೂಲಕ ಜನರು ಜಿಗಿಯುತ್ತಿದ್ದರು ಮತ್ತೆ ಕೆಲವರು ಶೌಚಾಗೃಹದಲ್ಲಿ ಅವಿತು ಕುಳಿತಿದ್ದರು ಎಂದು ಕ್ಯಾಲಿಪೋರ್ನಿಯಾದ ಲ್ಯೂಥೆರನ್ ವಿಶ್ವವಿದ್ಯಾಲಯ ವಿದ್ಯಾರ್ಥಿ ಘಟಕ ಅಧ್ಯಕ್ಷ ನಿಖ್ ಸ್ಟೈನ್ ವೆಂಡರ್ ಹೇಳಿದ್ದಾರೆ.
loading...