ಗಣ್ಯರಿಂದ ಅಂಬರೀಷ್ ಪಾರ್ಥಿವ ಶರೀರದ ಅಂತಿಮ ದರ್ಶನ

0
7
loading...

ಬೆಂಗಳೂರು: ಶನಿವಾರ ರಾತ್ರಿ ವಿಧಿವಶರಾದ ಅಂಬರೀಷ್ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ರಾಜಕೀಯ, ಚಿತ್ರರಂಗದ ಗಣ್ಯರು ಆಗಮಿಸಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ನಟ ಸೂಪರ್ ಸ್ಟಾರ್ ರಜನಿಕಾಂತ್ ಅಂಬಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಅಂಬರೀಶ ಅವರ ಪತ್ನಿ ಸುಮಲತಾಗೆ ಸಾಂತ್ವನ ಹೇಳಿದ್ದಾರೆ. ಅಂಬರೀಶ ಅವರನ್ನು ನೆನೆದು ರಜನಿಕಾಂತ ಕಣ್ಣೀರಿಟ್ಟರು.
ಕಾಲಿವುಡ್ ನಟ ಶರತ್ ಕುಮಾರ್ ಕುಟುಂಬ ಸಮೇತ ಬಂದು ಅಂಬರೀಷ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡರು. ನಟ ವಿ. ರವಿಚಂದ್ರನ್, ಪುನೀತ್ ರಾಜ್ ಕುಮಾರ್ , ಸಾಹಿತಿ ಹಂಸಲೇಖ ಅವರೆಲ್ಲ ಅಂತಿಮ ದರ್ಶನ ಪಡೆದುಕೊಂಡರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಸೇರಿದಂತೆ ರಾಜಕೀಯ ಗಣ್ಯರು ಅಂಬರೀಷ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡರು.

loading...