ಗಮನ ಸೆಳೆದ ಪತಿ-ಪತ್ನಿಯರಿಗಾಗಿ ಮಿಕ್ಸೆಡ್ ಡಬಲ್ಸ್ ಪಂದ್ಯಾವಳಿ

0
0
loading...

 

ಕನ್ನಡಮ್ಮ ಸುದ್ದಿ-ದಾಂಡೇಲಿ: ಸ್ಥಳೀಯ ಗಾಂಧಿನಗರದ ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಆಶ್ರಯದಲ್ಲಿ, ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನ್ ಸಹಕಾರ ಹಾಗೂ ರಾಷ್ಟ್ರೀಯ ಕ್ರೀಡಾ ತರಬೇತುದಾರ ಅಮರ್.ಎಂ.ಗುರವ ಅವರ ಮಾರ್ಗದರ್ಶನದಲ್ಲಿ ನಗರದ ಸುಭಾಸನಗರದ ಒಳ ಕ್ರೀಡಾಂಗಣದಲ್ಲಿ ದಾಂಡೇಲಿ, ಹಳಿಯಾಳ, ಜೊಯಿಡಾ ತಾಲೂಕು ಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ಯಶಸ್ವಿಯಾಗಿ ಜರುಗಿತು.
ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ ಅವರು ದಾಂಡೇಲಿಯಲ್ಲಿ ಸರ್ವ ಧರ್ಮ ಸಮನ್ವಯತೆಯನ್ನು ಜನಮಾನಸದಲ್ಲಿ ಅಚ್ಚಳಿಯದೆ ಊಳಿಯುವಂತಹ ಕೆಲಸವನ್ನು ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳ ಮಾಡುತ್ತಿರುವುದು ಅಭಿನಂದನೀಯ. ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಕಾರ್ಯಕ್ರಮಗಳ ಜೊತೆಗೆ ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಯುವಕ ಮಂಡಳ ಜಿಲ್ಲೆಯಲ್ಲೆ ಮೊದಲ ಬಾರಿಗೆ ಎನ್ನಬಹುದಾದ ಪತಿ-ಪತ್ನಿಯರಿಗಾಗಿ ಮಿಕ್ಸೆಡ್ ಡಬ್ಬಲ್ಸ್ ಪಂದ್ಯಾವಳಿಯನ್ನು ಆಯೋಜನೆ ಮಾಡಿರುವುದು ಶ್ಲಾಘನೀಯ. ದಾಂಡೇಲಿಯಲ್ಲಿ ಬ್ಯಾಡ್ಮಿಂಟನ್ ಕ್ರೀಡೆಗೆ ಹೆಚ್ಚಿನ ಒತ್ತನ್ನು ನೀಡುವ ಉದ್ದೇಶದಿಂದ ಒಳ ಕ್ರೀಡಾಂಗಣಕ್ಕೆ ಬೇಕಾಗುವ ಅವಶ್ಯ ಸೌಲಭ್ಯಗಳನ್ನು ಒದಗಿಸಲು ಸಚಿವ ದೇಶಪಾಂಡೆಯವರು ಪ್ರಾಮಾಣಿಕ ಪ್ರಯತ್ನಿಸಲಿದ್ದಾರೆ. ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನ್ ಹಾಗೂ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದವರು ಬ್ಯಾಡ್ಮಿಂಟನ್ ಕ್ರೀಡಾ ಸುದಾರಣೆಗಾಗಿ ನೀಡಿದ ಮನವಿಗೆ ಸಕಾಲಿಕವಾಗಿ ಸ್ಪಂದಿಸುವ ಭರವಸೆ ನೀಡಿ ಪಂದ್ಯಾವಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನ್ ಅಧ್ಯಕ್ಷ ಎಸ್.ಪ್ರಕಾಶ ಶೆಟ್ಟಿಯವರು ವಹಿಸಿ ಮಾತನಾಡುತ್ತಾ, ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಸಮಾಜಮುಖಿ ಕಾರ್ಯವನ್ನು ಕೊಂಡಾಡಿ, ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನ್ ಬ್ಯಾಡ್ಮಿಂಟನ್ ಕ್ರೀಡೆಗೆ ಹೆಚ್ಚಿನ ಒತ್ತು ಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅದರ ಫಲಶೃತಿಯಾಗಿ ದಾಂಡೇಲಿಯ ಏಳೆಂಟು ಮಕ್ಕಳು ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿ ತಿಂಗಳಿಗೊಂದರಂತೆ ಪಂದ್ಯಾವಳಿಯನ್ನು ಆಯೋಜಿಸುವ ಉದ್ದೇಶವಿದೆ ಎಂದರು. ಇನ್ನೋರ್ವ ಉದ್ಘಾಟಕ ಹಿರಿಯ ಶಟ್ಲ್ ಬ್ಯಾಡ್ಮಿಂಟನ್ ಆಟಗಾರ ಇನಾಜ್ ವಾಜ್ ಅವರು ಪಂದ್ಯಾವಳಿಗೆ ಶುಭಕೋರಿ ಮಾತನಾಡಿದರು. ವೇದಿಕೆಯಲ್ಲಿ ರಾಷ್ಟ್ರೀಯ ಕ್ರೀಡಾ ತರಬೇತುದಾರ ಅಮರ್.ಎಂ.ಗುರವ, ಸಮಾಜ ಸೇವಕರುಗಳಾದ ಸಂತೋಷ್ ಶೆಟ್ಟಿ, ವಿಜಯ್ ಕುಮಾರ್ ಶೆಟ್ಟಿ, ಪೀಟರ್‍ಪೌಲ್ ಗೋನ್ಸಾಲಿಸ್, ನವೀನ ಕಾಮತ್, ಡಾ: ಸಲ್ಮಾನ್ ಗೈಮಾ, ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಸತ್ತುರಾಮ ಧರೇಕರ, ಮುರುಗೇಶ ನಾಯರ್, ಚಂದ್ರು ಆರ್ಯ, ಅಬ್ಬಸಾಲಿ, ಪ್ರಶಾಂತ ಶಿಳ್ಳಿನ, ಡಿ.ಜೆ.ಪ್ರಕಾಶ, ಪಾಸ್ಕಲ್ ಪರ್ನಾಂಡೀಸ್, ಯಾಹೋನಾ.ಓ.ಹರಿಜನ, ಮನೋಜ್.ಪಿ.ಕುರುಬಗಟ್ಟಿ, ಸಚ್ಚಿನ್ ಜಾಧವ, ಶುಭಂ, ಪ್ರಜ್ವಲ್, ಮೊದಲಾದವರು ಉಪಸ್ಥಿತರಿದ್ದರು. ಯುವಕ ಮಂಡಳದ ಅಧ್ಯಕ್ಷ ಸಂದೇಶ್.ಎಸ್.ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 42 ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

ಗಮನ ಸೆಳೆದ ಪಂದ್ಯಾವಳಿ : ಮಕ್ಕಳಿಗೆ ಹಾಗೂ ಪತಿ ಪತ್ನಿಯರಿಗಾಗಿ ಒಟ್ಟು ಎರಡು ದಿನಗಳವರೆಗೆ ಪಂದ್ಯಾವಳಿಯೂ ಅಚ್ಚುಕಟ್ಟು ವ್ಯವಸ್ಥೆಯಿಂದ ಗಮನ ಸೆಳೆಯಿತು. ಪುಟಾಣಿ ಅಂಗನವಾಡಿ ಕೇಂದ್ರ, ಪ್ರಾಥಮಿಕ ಚಿಕಿತ್ಸಾ ಕೇಂದ್ರ ಹೀಗೆ ವಿವಿಧ ಆಕರ್ಷಕ ವ್ಯವಸ್ಥೆಗಳಿಂದ ಪಂದ್ಯಾವಳಿ ವಿಭಿನ್ನವಾಗಿ ಮೂಡಿಬಂತು. ಪತಿ-ಪತ್ನಿಯರು ಸಂಭ್ರಮದಿಂದ ಆಟವಾಡಿ ಪಂದ್ಯಾವಳಿಗೆ ಶೋಭೆ ತಂದರು. ಆಕರ್ಷಣೆಗೆ ಪಾತ್ರವಾದ ಪ್ರಸಾದ ಹುಣ್ಸವಾಡಕರ ಅವರಿಂದ ನೀರಿನಲ್ಲಿ ತೇಲಾಡುವ ಪ್ರಾಣಾಯಾಮ: ಹಳಿಯಾಳದ ಪ್ರಸಾದ ಹುಣ್ಸವಾಡಕರ ಅವರಿಂದ ಒಳಕ್ರೀಡಾಂಗಣದ ಆವರಣದಲ್ಲಿರುವ ಈಜುಕೊಳದಲ್ಲಿ ಸುಮಾರು 45 ನಿಮಿಷಗಳವರೆಗೆ ತೇಲಾಡುವ ಪ್ರಾಣಾಯಾಮವು ನಡೆದು ಆಕರ್ಷಣೆಗೆ ಪಾತ್ರವಾಯಿತು.

loading...