ಗರ್ಭಿಣಿ ಮಹಿಳೆಯ ಹತ್ಯ ಶಂಕೆ ?

0
0
loading...

ಆಲಮಟ್ಟಿ: ನರಕ ಚತುದರ್ಶಿ ದಿನ ಮಂಗಳವಾರ, ಗರ್ಭೀಣಿ ಮಹಿಳೆಯೋರ್ವಳ ಕುತ್ತಿಗೆ ಕೊಯ್ದು ಕೊಲೆ ಮಾಡಿದ ಘಟನೆ ಸುಕ್ಷೇತ್ರ ಯಲಗೂರದಲ್ಲಿ ನರಕಚತುದರ್ಶಿ ದಿನ ಮಂಗಳವಾರ ನಡೆದಿದೆ.
ಮೃತ ಮಹಿಳೆ ರೇಣುಕಾ ಶಂಕರ ನಾಯಕ (22).

ಮಹಿಳೆ ರೇಣುಕಾ ಮೂಲತಃ ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಶಿರವಾರ ಗ್ರಾಮದವರು. ಅಲ್ಲಿಯ ಸನಿಹದ ಮುಕ್ಕಲಗುಂದೆ ತಾಂಡಾ ಶಂಕರ ನಾಯಕ ಪರಸ್ಪರ ಪ್ರೀತಿಸಿ ತಾಯಿಯ ಮನೆಯ ವಿರೋಧದ ಮಧ್ಯೆ ಮದುವೆಯಾಗಿದ್ದರು.
ಅಲ್ಲಿ ವಿರೋಧ ಹೆಚ್ಚಾಗಿದ್ದರಿಂದ ಮದುವೆಯಾದ ಬಳಿಕ ಯಲಗೂರದಲ್ಲಿ ಕಳೆದ ಎರಡು ವರ್ಷದಿಂದ ವಾಸಿಸುತ್ತಿದ್ದರು.

ಹಿನ್ನಲೆ: ಎರಡು ವರ್ಷಗಳ ಹಿಂದೆ ವಿವಾಹ ಬಂಧನಕ್ಕೊಳಗಾಗಿ ಸುಂದರ ಬದುಕನ್ನು ಕಂಡು ಕೊಂಡಿದ್ದವು. ಮನೆಯವರಿಂದ ತಮ್ಮ ಪ್ರೀತಿಗೆ ತೊಂದರೆವಾದೀತೆಂಬ ವಿಚಾರದಿಂದಲೆ ಯಲಗೂರೇಶಪ್ಪ ನೀನೆ ಕಾಪಾಡಪ್ಪ ಅಂತಾ ಭಾವಿಸಿ ಧಾರ್ಮಿಕ ಪುಣ್ಯಕ್ಷೇತ್ರ ಯಲಗೂರ ಗ್ರಾಮಕ್ಕೆ ಈ ಜೋಡಿಗಳು ಬಂದು ವಾಸಿಸಿ ಸಂಸಾರ ಹೂಡಿದ್ದವು.
ರೇಣುಕಾ ನಾಲ್ಕು ತಿಂಗಳ ಗರ್ಭಿಣಿವಾಗಿದ್ದಳು ಗಂಡ ಶಂಕರ ನಿಡಗುಂದಿಯಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ. ಗರ್ಭಿಣಿಯಾಗಿದ್ದರಿಂದ ತಾಯಿ ಶಿವಲಿಂಗಮ್ಮ ಪೂಜಾರಿಯನ್ನು ಇತ್ತೀಚಿಗಷ್ಟೇ ರೇಣುಕಾ ಕರೆಯಿಸಿಕೊಂಡಿದ್ದಳು. ತಾಯಿ ಬಂದ ಮೇಲೆ, ಸಹೋದರ ಮಲ್ಲಿಕಾರ್ಜುನ ಪೂಜಾರಿ, ತಂಗಿಯ ಗಂಡ ರಮೇಶ ಗೋಲಿ ಕೂಡಾ ಬಂದಿದ್ದರು. ಮಲ್ಲಿಕಾರ್ಜುನ, ರಮೇಶ ಮರಳಿ ಹೋಗಿದ್ದರು. ತಾಯಿ ಮಾತ್ರ ಇಲ್ಲಿಯೇ ಇದ್ದರು.

ಕರಾಳ ನರಕ ಚತುದರ್ಶಿ: ಸಂಜೆ 6 ಗಂಟೆ ಸುಮಾರು ಮನೆಗೆ ಬಂದ ಇಬ್ಬರು ಹಾಗೂ ತಾಯಿ ಸೇರಿ, ದೀಪ ಹಚ್ಚುತ್ತಿದ್ದ ತಂಗಿಯನ್ನು ಒಳಗೆ ಕರೆದು ಕುತ್ತಿಗೆಯಿಂದ ಕೊಲೆ ಮಾಡಿದ ಶಂಕೆ ಮೂಡಿದೆ.
ಕೊಲೆ ಮಾಡಿದ ನಂತರ ಮೂವರು ಸೇರಿ ಬೈಕ್ ಮೇಲೆ ಅವಸರವಸರವಾಗಿ ಹೋಗಿದ್ದನ್ನು ಕಂಡ ಮನೆಯ ಮಾಲೀಕ, ತಕ್ಷಣವೇ ಮೇಲೆ ಹೋಗಿ ನೋಡಿದಾಗ ರೇಣುಕಾ ರಕ್ತದ ಮಡುವಿನಲ್ಲಿ ಬಿದ್ದದ್ದು ಕಂಡಿದೆ. ತಕ್ಷಣವೇ ಪತಿ ಶಂಕರಗೆ ತಿಳಿಸಿದ್ದಾರೆ.

ಮಗಳು ಗರ್ಭಿಣಿ ಅಂತ ಗೊತ್ತಿದ್ದರು ಬಿಡದ ರಾಕ್ಷಸಿ ರೂಪದ ಈ ತಾಯಿ ಎಸಗಿದ ಕೃತ್ಯ ತೀವ್ರತರ ಖಂಡನೆಗೆ ಒಳಗಾಗಿದೆ. ಶಂಕರ-ರೇಣುಕಾಳ ಸ್ವಚ್ಛಂದ ಪ್ರೀತಿಗೆ ಕುಟುಂಬಸ್ಥರೆ ಇಲ್ಲಿ ಅಡ್ಡಿಯಾಗಿ ವಿಲನ್ ವಾಗಿದ್ದು ದುರದೃಷ್ಠಕರ ಅನ್ಯ ಕೋಮಿನ ಯುವಕನ ಜೊತೆಗೆ ವಿವಾಹ ವಾಗಿದ್ದ ರೇಣುಕಾಳಿಗೆ ಕಂಠಕವಾಗಿ ಮುಳ್ಳಾಗಿ ಪರಿಣಮಿಸಿದೆ. ಮನೆಯವರ ವಿರೋಧ ಈ ಮಟ್ಟಕ್ಕೆ ರೂಪತಾಳಿದ್ದು ನಿಜಕ್ಕೂ ಖೇದನೀಯ ಮನೆಯವರಿಂದಲೇ ಗರ್ಭಿಣಿ ಹೆಣ್ಣುಮಗಳು ಹತ್ಯೆಗೀಡಾಗಿದ್ದಾಳೆ ಎಂದು ಶಂಕೆ ವ್ಯಕ್ತವಾಗಿದ್ದು ಇದೊಂದು ಮೇಲ್ನೋಟಕ್ಕೆ ಇದೊಂದು ಮರ್ಯಾದೆ ಹತ್ಯೆ ಎಂದು ಕಂಡು ಬರುತ್ತಿದ್ದು, ಪೊಲೀಸರ ತನಿಖೆಯಿಂದಲೇ ಇದು ಗೊತ್ತಾಗಲಿದೆ.
ನಿಡಗುಂದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...