ಗ್ರಾಮೀಣ ಕ್ರಿÃಡೆಗಳ ನಶಿಸುತ್ತಿವೆ: ಸಂಜಯ

0
0
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಇಂದಿನ ದಿನಗಳಲ್ಲಿ ಯುವ ಜನಾಂಗವು ಬರೀ ಮೊಬೈಲ್‌ನಲ್ಲಿ ಫೇಸಬುಕ್, ವ್ಹಾಟ್ಸಪ್ ಮುಂತಾದವುಗಳಲ್ಲಿ ಹೆಚ್ಚು ಕಾಲಕಳೆಯುತ್ತಿದ್ದು,ಕಬ್ಬಡಿಯಂತ ಗ್ರಾಮೀಣ ಕ್ರಿÃಡೆಗಳು ನಶಿಸಿ ಹೋಗುವ ಹಂತ ತಲುಪುತ್ತಿವೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದರು.
ತಾಲೂಕಿನ ಕುದ್ರೆÃಮನಿ ಗ್ರಾಮದ ಡಾ.ಬಾಬಾಸಾಹೇಬ ಅಂಬೇಡಕರ ಯುವಕ ಮಂಡಳ ಇವರ ವತಿಯಿಂದ ಮರಾಠಿ ಮತ್ತು ಪ್ರಾಥಮಿಕ ಶಾಲೆಯ ಪ್ರಾಂಗಣದಲ್ಲಿ ರವಿವಾರ ಆಯೋಜಿಸಿದ್ದ ಮುಕ್ತ ಕಬ್ಬಡಿ ಸ್ಪರ್ಧೆಯ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಯುವ ಜನಾಂಗವು ಬರೀ ಮೊಬೈಲ್‌ನಲ್ಲಿ ಫೇಸಬುಕ್, ವ್ಹಾಟ್ಸಪ್ ಮುಂತಾದವುಗಳಲ್ಲಿ ಹೆಚ್ಚು ಕಾಲಕಳೆಯುತ್ತಿದ್ದು ಇಂತಹ ಕ್ರಿÃಡೆಗಳು ನಶಿಸಿ ಹೋಗುವ ಹಂತ ತಲುಪುತ್ತಿವೆ, ಆದ್ದರಿಂದ ಇಂದಿನ ಯುವ ಜನಾಂಗವು ಕಬ್ಬಡಿ, ಕುಸ್ತಿ ಮುಂತಾದ ಭಾರತೀಯ ಕ್ರಿÃಡೆಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ಸದೃಡಗೊಳಿಸುವದರ ಜೊತೆಗೆ ಉತ್ತಮ ಕ್ರಿÃಡಾ ಪಟುಗಳಾಗಿ ತಮ್ಮ ಗ್ರಾಮಕ್ಕೆ ಹಾಗೂ ದೇಶಕ್ಕೆ ಕೀರ್ತಿ ತರುವತ್ತ ಹೆಚ್ಚು ಗಮನಹರಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜನ ಕಲ್ಯಾಣ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ, ಗೋಮಟೇಶ ವಿದ್ಯಾಪೀಠ, ಬೆಳಗಾವಿ ವತಿಯಿಂದ ಕಟ್ಟಡ ಕಾರ್ಮಿಕರಿಗೆ ನೋಂದಣಿ ಕಾರ್ಡುಗಳನ್ನು ವಿತರಿಸಿದರು. ಸದರಿ ಸಂಘದ ವತಿಯಿಂದ ಉಳಿದ ಕಾರ್ಮಿಕರೂ ಸಹಿತ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು. ಪ್ರವೀಣ ಪಾಟೀಲ, ಸಾಗರ ಶೇರೆಕರ, ಉಮೇಶ ಚೌಗುಲೆ, ಸಂಜಯ ವೈ ಪಾಟೀಲ, ವಿನಯ ಕದಮ, ಡಾ.ಯಲ್ಲಪ್ಪಾ ಪಾಟೀಲ, ಪರಶುರಾಮ ತುಪ್ಪಟ, ಭೈರು ಆನಂದಾಚೆ, ತಾನಾಜಿ ಪಾಟೀಲ, ಸಂದೀಪ ಪಾಟೀಲ, ಲಕ್ಷö್ಮಣ ಪನ್ಹಾಳಕರ, ಉಮಾಜಿ ಪಾಟೀಲ, ರಾಜೇಂದ್ರ ಪಾಟೀಲ, ಡಾ||ವ್ಹಿ.ಜಿ.ಬಡಸ್ಕರ, ಅಶೋಕ ಪನ್ಹಾಳಕರ, ನಿಂಗಪ್ಪಾ ಯಳ್ಳೂರಕರ, ರವಳು ಪನ್ಹಾಳಕರ, ಗೋಪಾಲ ಪಾಟೀಲ ಮುಂತಾದ ಅನೇಕ ಪ್ರಮುಖರು ಹಾಗೂ ಗ್ರಾಮಸ್ತರು ಉಪಸ್ಥಿತರಿದ್ದರು.

loading...