ಚತ್ತೀಸ್ ಗಢ: ಸಿಐಎಸ್ ಎಫ್ ಮೇಲೆ ಮಾವೋವಾದಿಗಳ ದಾಳಿ

0
0
loading...

 

ರಾಯ್ಪುರ: ವಿಧಾನಸಭಾ ಚುನಾವಣೆಗೆ ಸಜ್ಜುಗೊಂಡಿರುವ ಚತ್ತೀಸ್ ಗಢದ ದಾಂತೆವಾಡದಲ್ಲಿ ಮಾವೋವಾದಿಗಳ ದಾಳಿ ನಡೆದಿದ್ದು, ನಾಲ್ವರು ಜೀವ ತೆತ್ತಿದ್ದಾರೆ. 

ಸಿಐಎಸ್ಎಫ್ ನ್ನು ಗುರಿಯಾಗಿರಿಸಿಕೊಂಡು ಮಾವೋವಾದಿಗಳು ದಾಳಿ ನಡೆಸಿದ್ದು,  ಪಕ್ಷದ ಪರ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡುವುದಕ್ಕೂ ಮುನ್ನ ಈ ಘಟನೆ ನಡೆದಿದೆ.  ಮಾವೋವಾದಿಗಳು ಬಳಕೆ ಮಾಡಿದ ಸುಧಾರಿತ ಸ್ಫೋಟ ಸಾಧನದ ಮೂಲಕ ನಡೆಸಿರುವ ಸ್ಫೋಟಕ್ಕೆ ಓರ್ವ ಭದ್ರತಾ ಸಿಬ್ಬಂದಿಯೂ ಸೇರಿದಂತೆ 4 ಜನರು ಬಲಿಯಾಗಿದ್ದಾರೆ

ಮಿನಿ ಬಸ್ ನ ಚಾಲಕ, ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇಬ್ಬರು ಯೋಧರಿಗೆ ತೀವ್ರವಾದ ಗಾಯಗಳುಂಟಾಗಿದ್ದು, ಭದ್ರತಾ ಸಿಬ್ಬಂದಿಗಳು ಚುನಾವಣಾ ಕಾರ್ಯದಲ್ಲಿ ತೊಡಗಿದ್ದರೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ ಎಂದು ದಾಂತೇವಾಡ ಎಸ್ ಪಿ ಅಭಿಷೇಕ್ ಪಲ್ಲವ ಹೇಳಿದ್ದಾರೆ. ನ.09 ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. 

 

loading...