ಜಮಖಂಡಿಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಶ್ರಮಕ್ಕೆ ಸಂದ ಜಯ: ಕೈ ಹಿಡಿದ ಮತದಾರ

0
0
loading...

ಬೆಳಗಾವಿ: ಜಮಖಂಡಿ ಮತ ಕ್ಷೇತ್ರದ ಉಪ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ತಮಗೆ ವಹಿಸಿದ ಕೆಲಸವನ್ನು ನಿಷ್ಠೆÀ ಹಾಗೂ ಶ್ರದ್ಧೆಯಿಂದ ಅಲ್ಲಿಯ ಎಲ್ಲ ನಾಯಕರ ಹಾಗೂ ಕಾರ್ಯಕರ್ತರ ಜೊತೆಗೂಡಿ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಸುತ್ತಾಡಿ ಮತದಾರರನ್ನು ಓಲೈಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮೇಗೌಡ 39,480 ಮತಗಳಿಂದ ಜಯಭೇರಿ ಬಾರಿಸಲು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್‍ರದ್ದು ಬಹು ದೊಡ್ಡ ಪಾತ್ರವಾಗಿದ್ದು ಅವರು ಪಟ್ಟ ಶ್ರಮಕ್ಕೆ ಫಲ ದೊರೆತಂತಾಗಿದೆ.

loading...