ಜಯಮಾಲ ವಿರುದ್ಧ ಕಾಂಗ್ರೆಸ್ಸಿಗರು ಗರಂ

0
1
loading...

ಬೆಂಗಳೂರು:ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಶಾಶ್ವತವಾಗಿ ಅಧಿಕಾರದಲ್ಲಿ ಇರಲಿದ್ದಾರೆ ಎಂಬ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲ ಹೇಳಿಕೆ ಇದೀಗ ಕಾಂಗ್ರೆಸ್‍ನಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರಸುತ್ತ ಸಚಿವೆ ಜಯಮಾಲ ಹೇಳಿಕೆಗೆ ಹಾಸನದ ಕಾಂಗ್ರೆಸ್ ಮುಖಂಡ,ಮಾಜಿ ಸಚಿವ ಎ.ಮಂಜು ಗರಂ ಆಗಿದ್ದು,ಬಣ್ಣ ಹಾಕಿಕೊಂಡು ರಾಜಕೀಯಕ್ಕೆ ಬಂದವರಿಗೆ ಕಾರ್ಯಕರ್ತರೊಂದಿಗೆ ಒಡನಾಟವಿಲ್ಲ.ಸಚಿವ ಸ್ಥಾನ ಉಳಿಸಿಕೊಳ್ಳಲು ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ಸಚಿವೆಗೆ ತೀರುಗೇಟು ನೀಡಿದ್ದಾರೆ.
ಅಲ್ಲದೆ, ಹಾಸನದ ರಾಜಕೀಯ ಪರಿಸ್ಥಿತಿ ಬಗ್ಗೆ ಸಚಿವೆ ಜಯಮಾಲ ಅವರಿಗೆ ಗೊತ್ತಿಲ್ಲ.ಹೀಗಾಗಿ ಇಂತಹ ಹೇಳಿಕೆ ಕೊಟ್ಟಿರುವುದು ಸರಿಯಲ್ಲ ಎಂದು ನೇರವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.
ಜಯಮಾಲಾ ಅವರು ಪಕ್ಷಕ್ಕೆ ಮುಜಗರ ತರುವಂತೆ ಹೇಳಿಕೆ ನೀಡಿದ್ದಾರೆ. ಅನುಭವ ಇಲ್ಲದವರಿಗೆ ಅಧಿಕಾರ ನೀಡಿದರೇ ಹೀಗೆ ಆಗುವುದು. ಯಾರದ್ದೋ ಓಲೈಕೆಗಾಗಿ ಅವರು ಈ ಹೇಳಿಕೆ ನೀಡಿದ್ದಾರೆ.ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದರು. ಅವರು ಸಾಯವವರೆಗೂ ಹಿರೋಯಿನ್ ಎಂದುಕೊಂಡಿದ್ದರು.ಆದರೆ ಯಾರು ನೋಡುವವರಿಲ್ಲವೆಂದು ರಾಜಕೀಯಕ್ಕೆ ಬಂದಿದ್ದಾರೆ. ಚಿತ್ರರಂಗದಲ್ಲಿ ದುಡ್ಡು ಮಾಡಿ ರಾಜಕೀಯಕ್ಕೆ ಬಂದಿದ್ದಾರೆ. ಸಚಿವ ರೇವಣ್ಣರನ್ನ ಹೊಗಳಿದ ಕುರಿತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅವರು ಕ್ಷಮೆ ಕೇಳಬೇಕು ಎಂದು ಮಾಜಿ ಸಚಿವ ಎ.ಮಂಜು ಒತ್ತಾಯಿಸಿದ್ದಾರೆ.
ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ಚಾರೂಕೀರ್ತಿ ಭಟ್ಟಾರಕ ಸ್ವಾಮಿಗಳಿಗೆ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರ ಅಭಿವೃದ್ಧಿ ಕಾರ್ಯಗಳನ್ನು ಬಣ್ಣಿಸಿ ನೀವು ಇರೋವರೆಗೂ ಸೋಲುವುದೇ ಇಲ್ಲ. ಕೊನೆಯವರೆಗೂ ಶಾಸಕರಾಗಿರುತ್ತೀರಿ ಎಂದು ಹಾಡಿ ಹೊಗಳಿದ್ದರು.
ಹಾಸನದಲ್ಲಿ ಶುಚಿತ್ವಕ್ಕೆ ರೇವಣ್ಣ ಅವರು ನೀಡಿರುವ ಆದ್ಯತೆಯನ್ನು ಎಲ್ಲ ಕಡೆ ಜನರು ಮಾತನಾಡುತ್ತಿದ್ದಾರೆ. ಜನರು ಏನೂ ಕೇಳದೇ ಇದ್ದರೂ ಅವರಿಗೆ ಬೇಕಾದುದನ್ನು ಅರ್ಥೈಸಿಕೊಂಡು ರೇವಣ್ಣ ಅವರೇ ಒಂದು ಸಾಮ್ರಾಜ್ಯ ನಿರ್ಮಾಣ ಮಾಡಿದ್ದಾರೆ ಎಂದಿದ್ದರು.
ಹಾಸನ ಜಿಲ್ಲೆ ನೋಡಿದಾಗ ಅವರ ಶ್ರಮದ ದರ್ಶನವಾಗಲಿದೆ. ಯಾವುದೇ ಸರ್ಕಾರವಿರಲಿ, ವಿಧಾನಸೌಧದಲ್ಲಿ ಇಂಥ ಕೆಲಸ ನಮ್ಮ ಜಿಲ್ಲೆಗೆ ಆಗಬೇಕು ಎಂದು ಏಕೆ ಪಟ್ಟು ಹಿಡಿಯುತ್ತಾರೆ ಎಂಬುದು ನನಗೀಗ ಅರ್ಥವಾಗಿದೆ. ಹೀಗಾಗಿ ರೇವಣ್ಣ ಅವರು ಬದುಕಿರುವವರೆಗೂ ಶಾಸಕರಾಗಿರುತ್ತಾರೆ ಎಂದು ಭವಿಷ್ಯ ನುಡಿದರು.

loading...