ಜಯಲಲಿತಾ ಕಂಚಿನ ಪ್ರತಿಮೆ ಚೆನ್ನೈನಲ್ಲಿ ಅನಾವರಣ

0
9
loading...

ನವದೆಹಲಿ:ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾರ ಕಂಚಿನ ಪ್ರತಿಮೆಯೊಂದನ್ನು ಚೆನ್ನೈನಲ್ಲಿ ಅನಾವರಣಗೊಳಿಸ ಲಾಯಿತು.
ಚೆನ್ನೈನ ರೋಯಪೆಟ್ಟಾದಲ್ಲಿರುವ ಎಐಡಿಎಂಕೆ ಮುಖ್ಯ ಕಚೇರಿಯ ಪ್ರಾಂಗಣದಲ್ಲಿ ಜಯಾ ಅವರ ಪ್ರತಿಮೆಯನ್ನು ಮುಖ್ಯಮಂತ್ರಿ ಎಡಪ್ಪಡಿ ಕೆ. ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಒ. ಪನ್ನೀರ್‍ಸೆಲ್ವಂ ಅವರು ಲೋಕಾರ್ಪಣೆಗೊಳಿಸಿದರು.
2016ರ ಡಿಸೆಂಬರ್‍ನಲ್ಲಿ ಜಯಲಲಿತಾರ 70ನೇ ಹುಟ್ಟುಹಬ್ಬದ ಅಂಗವಾಗಿ ಮಾಜಿ ಸಿಎಂ ದಿ.ಎಂ.ಜಿ.ರಾಮಚಂದ್ರನ್‍ರ ಪ್ರತಿಮೆ ಪಕ್ಕದಲ್ಲೇ ಜಯಾ ಅವರ ಕಂಚಿನ ಪ್ರತಿಮೆಯೊಂದನ್ನು ನಿರ್ಮಿಸಲಾಗಿತ್ತು.
ಆದರೆ,ಆ ಪ್ರತಿಮೆಯು ಜಯಾರ ಆಪ್ತೆ ಚಿನ್ನಮ್ಮಾ ಶಶಿಕಲಾ ಅವರ ಮುಖವನ್ನು ಹೋಲುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಕೇಳಿಬಂದಿದ್ದರಿಂದ ಪ್ರತಿಮೆಯನ್ನು ತೆರವುಗೊಳಿಸಿ ಹೊಸ ಪ್ರತಿಮೆಯನ್ನು ನಿರ್ಮಿಸಲಾಗಿದೆ.

loading...