ಟಿಪ್ಪು ಜಯಂತಿ ಆಚರಣೆ ಖಂಡನೀಯ: ಶಿವಾಜಿ

0
0
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಟಿಪ್ಪು ಸುಲ್ತಾನ ಜಯಂತಿ ಜನ್ಮದಿನಾಚರಣೆಯ ವಿರುದ್ಧ ಭಾರತೀಯ ಜನತಾ ಪಕ್ಷದ ಸ್ಥಳೀಯ ಘಟಕವು ಈ ವರ್ಷವೂ ಸಹ ಪ್ರತಿರೋಧ ವ್ಯಕ್ತಪಡಿಸಲಿದೆ.
ಮಾಜಿ ಶಾಸಕ ಹಾಗೂ ಭಾಜಪ ಮುಖಂಡ ಸುನೀಲ ಹೆಗಡೆ ಪಕ್ಷದ ಅಧ್ಯಕ್ಷ ಶಿವಾಜಿ ನರಸಾನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಭಾರತೀಯನಾಗಿರದ ಟಿಪ್ಪು ಪರ್ಶಿಯಾ ದೇಶದಿಂದ ಬಂದವನಾಗಿದ್ದು ಮತಾಂತರಕ್ಕಾಗಿ ನರಮೇಧ ಮಾಡಿದ ಕ್ರೂರ ವ್ಯಕ್ತಿಯಾಗಿದ್ದಾನೆ. ಅಂತಹ ದುರುಳನ ಜನ್ಮದಿನವನ್ನು ರಾಜ್ಯ ಸರ್ಕಾರ ಹಮ್ಮಿಕೊಳ್ಳುತ್ತಿರುವುದು ಖಂಡನೀಯ ಸಂಗತಿಯಾಗಿದೆ.

ಕುರಾನ್‍ದಲ್ಲಿ ಮೃತ ವ್ಯಕ್ತಿಗಳ ಜನ್ಮದಿನ ಆಚರಿಸುವುದಕ್ಕೆ ವಿರೋಧವಿದೆ. ಕುರಾನ್ ನಂಬುವ ನೈಜ್ಯ ಮುಸ್ಲಿಂ ಜನರು ಟಿಪ್ಪು ಜಯಂತಿಯನ್ನು ಒಪ್ಪಿಕೊಳ್ಳಲಾರರು ಎಂದು ಹೇಳಿದ ಸುನೀಲ ಹೆಗಡೆ ಟಿಪ್ಪು ಜಯಂತಿ ವಿಷಯದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ನಿಲುವು ನಮ್ಮದೂ ಸಹ ನಿಲುವಾಗಿದೆ. ಟಿಪ್ಪು ಜಯಂತಿ ಅಂಗವಾಗಿ ನಡೆಯಲಿರುವ ಮೆರವಣಿಗೆಗೂ ಹಾಗೂ ಕಾರ್ಯಕ್ರಮಕ್ಕೂ ಸಹ ಆಕ್ಷೇಪವಿದೆ ಎಂದರು. ಟಿಪ್ಪು ಜನ್ಮದಿನಾಚರಣೆಯನ್ನು ಸರ್ಕಾರದಿಂದ ಆಚರಿಸುವ ತಾಲೂಕಾಡಳಿತದ ಪೂರ್ವಭಾವಿ ಸಭೆಗೂ ತೆರಳಿ ನಮ್ಮ ಆಕ್ಷೇಪದ ಬಗ್ಗೆ ಲಿಖಿತ ಮನವಿ ನೀಡುತ್ತೇವೆ. ಕಾರ್ಯಕ್ರಮದಂದು ಮಾಡಬೇಕಾದ ಪ್ರತಿಭಟನಾ ಸ್ವರೂಪದ ಬಗ್ಗೆ ಪಕ್ಷದಿಂದ ಬಂದ ಸೂಚನೆಯನ್ನು ಪಾಲಿಸಲಾಗುವುದು. ಮೆರವಣಿಗೆ ಹಮ್ಮಿಕೊಂಡ ಪಕ್ಷದಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು
ಕಬ್ಬಿಗೆ ಉತ್ತಮ ಬೆಲೆ ನೀಡಲಿ:- ಕೇಂದ್ರ ಸರ್ಕಾರವು ಪ್ರತಿ ಟನ್ ಕಬ್ಬಿಗೆ 2750 ರೂ. ದರ ಘೋಷಿಸಿದೆ. ಇದಕ್ಕೆ ಮಾನ್ಯತೆ ಕೊಟ್ಟು ಸ್ಥಳೀಯ ಸಕ್ಕರೆ ಕಾರ್ಖಾನೆಯವರು ಘೋಷಿತ ದರಕ್ಕಿಂತ ಹೆಚ್ಚಿನ ಮೊತ್ತವನ್ನು ಕಬ್ಬು ಬೆಳೆಗಾರರಿಗೆ ನೀಡಬೇಕು. ಕಾರ್ಖಾನೆಯವರು ಬಾಕಿ ಉಳಿದಿರುವ ಪ್ರೋತ್ಸಾಹ ಧನ ಪ್ರತಿ ಟನ್‍ಗೆ 305 ರೂ. ಗಳನ್ನು ನೀಡುವ ಬಗ್ಗೆ ಕಬ್ಬು ನುರಿಸುವ ಹಂಗಾಮು ಆರಂಭಗೊಳ್ಳುವ ಮುಂಚೆ ಯೋಗ್ಯ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆ.

ನಿಲುವಿಗೆ ಬದ್ಧ:- ಹಳಿಯಾಳ ಪಟ್ಟಣದಲ್ಲಿ ಬೀದಿಬದಿ ಹಾಗೂ ಎಲ್ಲಿ ಬೇಕಾದಲ್ಲಿ ಚಿಕನ್ ಹಾಗೂ ಮೀನು ಮಾರಾಟ ನಿಲ್ಲುವಂತಾಗಬೇಕು. ಅಕ್ರಮವಾಗಿ ನಡೆದಿರುವ ಬೀಫ್ ಮಾಂಸ ದಂಧೆ ನಿಲ್ಲಬೇಕು ಎಂಬ ನಿಲುವಿಗೆ ಬದ್ಧರಾಗಿದ್ದು, ಬೀದಿ ಬದಿ ನಡೆಯುತ್ತಿರುವ ಮೀನು ಮಾರಾಟವನ್ನು ಮೀನು ಮಾರುಕಟ್ಟೆಯೊಳಗೆ ನಡೆಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಈಗಿರುವ ಮೀನು ಮಾರುಕಟ್ಟೆ ಕಟ್ಟಡದ ಮೇಲೆ ಹೊಸದಾಗಿ ಮತ್ತೊಂದು ಕಟ್ಟಡ ನಿರ್ಮಿಸಲಾಗುತ್ತಿದ್ದು ಅಲ್ಲಿ ಚಿಕನ್ ಮಾರಾಟ ಮಾಡಲು ವ್ಯವಸ್ಥೆ ಮಾಡುವದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸುವ ಬಗ್ಗೆ ಪಕ್ಷದ ನಿಲುವಿಗೆ ಬದ್ಧರಿರುವುದಾಗಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಶಿವಾಜಿ ಪಾಟೀಲ, ವಾಸುದೇವ ಪೂಜಾರಿ, ಯಲ್ಲಪ್ಪಾ ಹೊನ್ನೋಜಿ, ಸಂತಾನ್ ಸಾವಂತ, ವಿಜಯ ಬೊಬಾಟಿ, ಪುರಸಭಾ ಸದಸ್ಯ ಸಂತೋಷ ಘಟಕಾಂಬ್ಳೆ, ಚಂದ್ರಕಾಂತ ಕಮ್ಮಾರ, ಉದಯ ಹೂಲಿ, ರೈತರ ಸೇವಾ ಸೊಸೈಟಿ ನಿರ್ದೇಶಕ ಆನಂದ ಕಂಚನಾಳಕರ ಮೊದಲಾದವರು ಪಾಲ್ಗೊಂಡಿದ್ದರು.

loading...