ದೀಪಾವಳಿ ಹಬ್ಬಕ್ಕೆ ಮೆರಗು ತಂದ ಬಣ್ಣ ಬಣ್ಣದ ರಗೋಲಿ

0
3
  • ದೀಪಾವಳಿ ಹಬ್ಬದ ಮೆರಗು ಹೆಚ್ಚಿಸಿದ ರಂಗೋಲಿ
loading...

ಕನ್ನಡಮ್ಮ ‌ಸುದ್ದಿ-ಬೆಳಗಾವಿ; ಭಾರತೀಯ ಸಂಸ್ಕೃತಿಯಲ್ಲಿ ದೀಪಾವಳಿಯನ್ನು ಅತೀ‌‌‌‌ವೈಭವದಿಂ‌ದ‌‌ ಆಚರಣೆ ಮಾಡಲಾಗುತ್ತದೆ. ಅದೇ ರೀತಿ ಮನೆ ,ಅಂಗಡಿಗಳ ಮುಂದೆ ಪ್ರತಿ‌ ವರ್ಷಕ್ಕಿಂತ‌ ಈ ಬಾರಿ ತ್ರೀಡಿ ರಂಗೋಲಿಗಳು ರಾರಾಜಿಸುತ್ತಿದ್ದು,ಸಾರ್ವಜನಿಕರ ಗಮನ ಸೆಳೆಯುತ್ತಿವೆ.

ಪ್ರತಿ ವರ್ಷ ಚುಕ್ಕಿಗಳನ್ನು ಇಟ್ಟು ಮನೆ ಮುಂದೆ ರಂಗೋಲಿ ಬಿಡಿಸಲಾಗುತಿತ್ತು.ಆದರೆ ಈ ವರ್ಷ ಎಲ್ಲ ಅಂಗಡಿ ಹಾಗೂ ಮನೆಯ ಮುಂದೆ 3ಡಿ ರಂಗೋಲಿಗಳು ಎಚ್ಚು ಕಂಡು ಬರುತ್ತಿದ್ದು, ಹಬ್ಬದ ಮೆರಗನ್ನು ,ಮನೆಯ ಶೋಭೆಯನ್ನು ಹೆಚ್ಚಿಸಿವೆ.
ಮೊದಲು ಒಂದೆ ಬಣ್ಣದಿಂದ ರಂಗೋಲಿ ಬಿಡಿಸುವುದು ಕಾಣಬಹುದಿದ್ದು,ಈಗ ಹಬ್ಬದ ಮೂರು ದಿನವು ಸಹ ವಿವಿಧ ಬಣ್ಣಗಳಿಂದ ರಂಗೋಲಿಯನ್ನು ಕಾಣಬಹುದಾಗಿದೆ.
ಒಟ್ಟಿನಲ್ಲಿ 3ಡಿ ರಂಗೋಲಿಗಳಿಂದ ದೀಪಾವಳಿ ದೀಪದೊಂದಿಗೆ ರಂಗೋಲಿಯು ಸಹ ನೋಡುಗರ ಗಮನ ಸೆಳೆಯುತ್ತಿವೆ.

loading...