ನಾಳೆ ಬೆಂಗಳೂರಲ್ಲಿ ಅಂಬಿ ಅಂತ್ಯಕ್ರಿಯೆ

0
7
loading...

ಬೆಂಗಳೂರು: ಶನಿವಾರ ರಾತ್ರಿ ಅನಾರೋಗ್ಯದಿಂದ ನಿಧನರಾದ ಕನ್ನಡದ ಚಿತ್ರ ನಟ, ಮಾಜಿ ಸಚಿವ ಅಂಬರೀಷ್ ಅವರ ಅಂತ್ಯಕ್ರಿಯೆ ನಾಳೆ (ಸೋಮವಾರ) ನಡೆಯಲಿದೆ. ಕಂಠೀರವ ಸ್ಟುಡಿಯೋದಲ್ಲಿರುವ ವರನಟ ಡಾ. ರಾಜ್‍ಕುಮಾರ್ ಅವರ ಸಮಾಧಿ ಬಳಿಯೇ ಅಂಬರೀಷ್ ಅವರ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ.ಶನಿವಾರ ನಗರದ ವಿಕ್ರಂ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಜೆಪಿ ನಗರದ ನಿವಾಸಕ್ಕೆ ಕೊಂಡೊಯ್ದು ನಂತರ ಕಲಾವಿದರ ಸಂಘಕ್ಕೆ ತಂದು ಪೂಜೆ ಸಲ್ಲಿಸಿ ನಂತರ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಪತ್ನಿ ಚನ್ನಮ್ಮ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಚಿತ್ರನಟ ರಜನಿಕಾಂತ್, ಶರತ್‍ಬಾಬು, ಪ್ರಕಾಶ್ ರೈ, ಭಾರತಿ ವಿಷ್ಣುವರ್ಧನ್, ಲಕ್ಷ್ಮಿ, ಉಪೇಂದ್ರ, ಪ್ರಿಯಾಂಕಾ, ರಾಕ್‍ಲೈನ್ ವೆಂಕಟೇಶ್, ಎಸ್.ನಾರಾಯಣ್, ಸಾ.ರಾ.ಗೋವಿಂದು, ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನಿತ್ ರಾಜ್‍ಕುಮಾರ್, ಯಶ್, ರಮೇಶ್ ಅರವಿಂದ್ ಇದ್ದರು.

loading...