ನ್ಯಾಮಗೌಡರಿಗೆ ಸಚಿವ ಸ್ಥಾನ ನೀಡಿ : ಪಾಟೋಳಿ

0
0
loading...

ಸಾವಳಗಿ: ಬಾರಿ ಜಿದ್ದಾಜಿದ್ದಿನಿಂದ ಹೋರಾಡಿ ಜಮಖಂಡಿ ಕ್ಷೆÃತ್ರದ ಶಾಸಕರಾಗಿ ಆಯ್ಕೆಯಾದ ನಂತರ ಸಮ್ಮಿಶ್ರ ಸರ್ಕಾರದ ಸಚಿವರಾಗಿ ಜಮಖಂಡಿ ಕ್ಷೆÃತ್ರಕ್ಕೆ ಕಾಲಿಡಬೇಕೆಂಬ ಹಂಬಲದಿಂದ ದೆಹಲಿಗೆ ತೇರಳಿ ಎ.ಐ.ಸಿ.ಸಿ. ಅದ್ಯಕ್ಷ ರಾಹುಲ ಗಾಂಧಿ ಅವರಿಗೆ ಭೇಟಿಮಾಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡು ಬರುವ ಮಾರ್ಗಮದ್ಯದಲ್ಲಿ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ ದಿ.ಸಿದ್ದು ನ್ಯಾಮಗೌಡರ ಆಸೆಯನ್ನು ಇಡೆರಿಸಬೇಕಾದರೆ ಅವರ ಪುತ್ರ ನೂತನ ಶಾಸಕ ಆನಂದ ನ್ಯಾಮಗೌಡರಿಗೆ ಸಚಿವ ಸ್ಥಾನ ನೀಡಿ ಕ್ಷೆÃತ್ರದ ಹಾಗು ಜಿಲ್ಲೆಯ ಅಭಿವೃದ್ದಿಗೆ ಅವಕಾಶ ಮಾಡಿಕೊಡಬೇಕೆಂದು ಗ್ರಾ.ಪಂ.ಅದ್ಯಕ್ಷ ಸುಭಾಷ ಪಾಟೋಳಿ ಹೇಳಿದರು.
ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿದ ಅವರು ದಿ. ಸಿದ್ದು ನ್ಯಾಮಗೌಡ ಅಕಾಲಿಕ ಮರಣದಿಂದ ತೇರುವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಆನಂದ ನ್ಯಾಮಗೌಡರನ್ನು ಗೆಲ್ಲಿಸಿದರೆ ಸಚಿವ ಸಂಪುಟದಲ್ಲಿ ಸ್ಥಾನ ಕೋಡಲಾಗುವದೆಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಮಲ್ಲಿಕಾರ್ಜುನ ಖರ್ಗೆಯವರು ಭರವಸೆ ನೀಡಿದ್ದರೂ ಆ ಭರವಸೆಯನ್ವಯ ಜಮಖಂಡಿ ಕ್ಷೆÃತ್ರದ ಜನತೆ ಅತ್ಯಂತ ಬಹುಮತದಿಂದ ಆಯ್ಕೆಮಾಡಿದೆ. ಅದಕ್ಕಾಗಿ ತಾವು ಕೊಟ್ಟ ಭರವಸೆಯನ್ನು ಜಮಖಂಡಿಯ ಜನತೆಗೆ ಇಡೆರಿಸಬೇಕೆಂದು ಹೇಳಿದರು. ನಂತರ ಕಾಂಗ್ರೆÃಸ ಮುಖಂಡ ಆದಿನಾಥ ಸಕಳೆ ಮಾತನಾಡಿ ಕಾಂಗ್ರೆÃಸ ಪಾಲಿಗೆ ಅತ್ಯಂತ ಪ್ರಮುಖ ಜಿಲ್ಲೆ ಬಾಗಲಕೋಟ. ಈ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಿಟ್ಟರೆ ಇವರೊಬ್ಬರೆ ಶಾಸಕರಾಗಿ ಆಯ್ಕೆಯಾಗಿರುವದು.

ಈ ಸುದ್ದಿಗೊಷ್ಠಿಯಲ್ಲಿ ಮುಖಂಡರಾದ ಸಂಜೀವ ಪಾಟೋಳಿ, ದುಂಡಪ್ಪ ಸಾವಳಗಿ, ಕಲ್ಲಪ್ಪ ಕೇಸ್ಕರ, ವಿಠ್ಠಲ ಉಮರಾಣಿ, ಪಿಂಟು ಸುರ್ಯವಂಶಿ ಸೇರಿದಂತೆ ಹಲವರು ಇದ್ದರು.

loading...