ನ.17 ರಿಂದ ಇನ್ನರ್‌ ವ್ಹೀಲ್‌ ಕ್ಲಬ್‌ ಆಶ್ರಯದಲ್ಲಿ “ಸ್ನೇಹ ಸಂಗಮ” ಕಾರ್ಯಕ್ರಮ

0
0
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ನಗರದ ಇನ್ನರ್‌ ವ್ಹೀಲ್‌ ಕ್ಲಬ್‌ ಆಶ್ರಯದಲ್ಲಿ ಇನ್ನರ್‌ ವ್ಹೀಲ್‌ ಜಿಲ್ಲೆ-317 ರ ಜಿಲಾ ಐ.ಎಸ್‌.ಓ-ಎಡಿಟರ್ಸ್‌ ಮೀಟ್‌-“ಸ್ನೇಹ ಸಂಗಮ” ಕಾರ್ಯಕ್ರಮವನ್ನು ಇದೇ ಬರುವ ನವಂಬರ್‌ 17 ಮತ್ತು 18 ರಂದು ಸ್ಥಳೀಯ ಹಾರ್ನೋಡಾ ಗ್ರಾಮದ ಸ್ಟಾರ್ಲಿಂಗ್‌ ರಿವರ್‌ ರೆಸಾರ್ಟ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಗರದ ಇನ್ನರ್‌ ವ್ಹೀಲ್‌ ಕ್ಲಬ್‌ ಅಧ್ಯಕ್ಷೆ ಡಾ: ಜಾಹೇರಾ ದಪೇದರ್‌ ಅವರು ಹೇಳಿದರು.
ಅವರು ಮಂಗಳವಾರ ಸ್ಥಳೀಯ ರೋಟರಿ ಶಾಲೆಯ ಸಭಾಭವನದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಇನ್ನರ್‌ ವ್ಹೀಲ್‌ ಜಿಲ್ಲೆ-317 ರ ವ್ಯಾಪ್ತಿಗೆ ಬರುವ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಇನ್ನರ್‌ ವ್ಹೀಲ್‌ ಕ್ಲಬಿನ ಪ್ರತಿನಿಧಿಗಳು ಭಾಗವಹಿಸುವ ಈ ವಿನೂತನ ಕಾರ್ಯಕ್ರಮವನ್ನು ಆಯೋಜಿಸುವ ಮಹತ್ವದ ಅವಕಾಶ ದೊರೆತಿರುವುದು ನಮ್ಮ ಇನ್ನರ್‌ ವ್ಹೀಲ್‌ ಕ್ಲಬಿಗೆ ದೊರೆತ ಗೌರವ ಎಂದು ಹೇಳಿದರು. ಎರಡು ದಿನಗಳವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ನ:17 ರಂದು ಸಂಜೆ 4.30 ಕ್ಕೆ ಸ್ನೇಹ ಸಂಗಮ ಕಾರ್ಯಕ್ರಮ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ರ್ಯಾಂಪ್‌ ವಾಕ್‌ ಹಾಗೂ ವಿವಿಧ ಬುಡಕಟ್ಟು ಸಂಸ್ಕೃತಿಗಳನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಸ್ಪರ್ಧೆಗಳು ನಡೆಯಲಿವೆ.
ನ.18 ರಂದು ನಡೆಯುವ ಕಾರ್ಯಕ್ರಮದಲ್ಲಿ ಸೋಲಾಪುರದ ಸರಕಾರಿ ಮೆಡಿಕಲ್‌ ಕಾಲೇಜಿನ ಪ್ರೊ: ಡಾ: ಸ್ಮೀತಾ ಚಾಕೋಟೆಯವರು ಪ್ರಧಾನ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಆ ದಿನದ ಕಾರ್ಯಕ್ರಮದಲ್ಲಿ ಪಾಶ್ಚಿಮಾತ್ಯ ಹಾಗೂ ಸಂಪ್ರದಾಯಿಕ ಶೈಲಿಯ ಪ್ಯಾಶನ್‌ ಷೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಹಲವಾರು ಸ್ಪರ್ಧೆಗಳನ್ನು ಆಯೋಜಿಲಾಗಿದ್ದು, ಪ್ರಮುಖವಾಗಿ ನೈಲ್‌ ಆರ್ಟ್‌, ಮೂಡ್‌ ಪೊಟ್‌ ಪೈಂಟಿಂಗ್‌, ಪ್ರಬಂಧ ಸ್ಪರ್ಧೆ, ಸೆಲ್ಪಿ ವಿಥ್‌ ನೇಚರ್‌, ಪರಿಸರಪೂರಕ ಹ್ಯಾಂಡ್‌ ಬ್ಯಾಗ್‌ ಮೇಕಿಂಗ್‌, ಮದರ್‌ ನೇಚರ್‌ ವಿಷಯದ ಮೇಲೆ ಸ್ಲೋಗನ್‌ ರಚಿಸುವಿಕೆ ಹೀಗೆ ಅನೇಕ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ: ಜಾಹೇರಾ ದಪೇದರ್‌ ಅವರು ಹೇಳಿದರು. ಇವೆಂಟ್‌ ಚೇರಮೆನ್‌ ಡಾ: ಜ್ಯೋತಿ ಪಾಟೀಲ ಅವರು ಮಾತನಾಡಿ ಉತ್ತಮ ಕಾರ್ಯಕ್ರಮವನ್ನು ಆಯೋಜಿಸುವ ಅವಕಾಶ ನಮ್ಮ ಕ್ಲಬಿಗೆ ದೊರೆತಿದ್ದು, ದೊರೆತ ಅವಕಾಶವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಇನ್ನರ್‌ ವ್ಹೀಲ್‌ ಕ್ಲಬಿನ ಸ್ಥಾಪಾಕಾಧ್ಯಕ್ಷೆ ವಿಜಯ ಕರ್ಕಿ, ಇವೆಂಟ್‌ ಕಾರ್ಯದರ್ಶಿ ಪ್ರೇಮಾ ಬಾವಾಜಿ, ಇನ್ನರ್‌ ವ್ಹೀಲ್‌ ಕ್ಲಬ್‌ ಕಾರ್ಯದರ್ಶಿ ಸುನೀತಾ ಮೆರ್ವಾಡೆ, ನೀಲಾಂಬಿಕಾ ಕಣಿಮೆಹಳ್ಳಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಇನ್ನರ್‌ ವ್ಹೀಲ್‌ ಕ್ಲಬಿನ ಪದಾಧಿಕಾರಿಗಳಾದ ರಾಜೇಶ್ವರಿ ನಾಯಕ, ಜ್ಯೋತಿ ಕಲ್ಲಣ್ಣವರ, ರೇಷ್ಮಾ ಕುಮಾರ್‌ ಕರಗಯ್ಯ, ಭಾವನಾ ಅಂಕೋಲೆಕರ, ತೃಪ್ತಿ ನಾಯಕ, ಸುನೀತಾ ಶೇಖರ, ಮಧು ಅಂಕೋಲೆಕರ, ಕನ್ವೆಹಳ್ಳಿ ರಶ್ಮಿ ನಾಯ್ಕ, ಶ್ವೇತಾ ಜಾಧವ, ಕರುಣಾ ಕಂಬದಕೋಣ, ಸ್ನೇಹಲ್‌ ಕಂಬದಕೋಣ, ವಿಜಯಲಕ್ಷ್ಮೀ ನಾಯ್ಕವಾಡಿ ಮೊದಲಾದವರು ಉಪಸ್ಥಿತರಿದ್ದರು.

loading...