ಫ್ಲೋರಿಡಾ ಯೋಗ ಸ್ಟುಡಿಯೋದಲ್ಲಿ ಗುಂಡಿನ ದಾಳಿ: 3 ಸಾವು

0
1

 ತಲಹಸ್ಸೀ: ಫ್ಲೋರಿಡಾ ರಾಜಧಾನಿ ತಲಹಸ್ಸೀಯಲ್ಲಿನ ಯೋಗಾ ಸ್ಟುಡಿಯೋದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಸ್ಥಳೀಯ ಕಾಲಮಾನದ ಪ್ರಕಾರ ಶುಕ್ರವಾರ ರಾತ್ರಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ವ್ಯಕ್ತಿಯೊಬ್ಬ ಈ ದಾಳಿಯನ್ನು ನಡೆಸಿದ್ದು, ದಾಳಿಯ ಉದ್ದೇಶಗಳು ಈವರೆಗೂ ತಿಳಿದುಬಂದಿದೆ.
ವ್ಯಕ್ತಿ ಗುಂಡು ಹಾರಿಸಲು ಆರಂಭಿಸುತ್ತಿದ್ದಂತೆಯೇ ಕೆಲವರು ತುರ್ತು ಸೇನೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆಯೇ ವ್ಯಕ್ತಿ ಗುಂಡು ಹಾರಿಸಿಕೊಕಂಡು ತಾನೂ ಕೂಡ ಮೃತನಾಗಿದ್ದಾನೆ.
ವ್ಯಕ್ತಿ ಗುಂಡಿನ ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಕೆಲವರು ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದರೆ, ಮತ್ತೆ ಕೆಲವರು ತಾವು ಗಾಯಗೊಂಡಿದ್ದರು, ಮತ್ತಷ್ಟು ಜನರನ್ನು ರಕ್ಷಣೆ ಮಾಡಲು ಯತ್ನಿಸುತ್ತಿದ್ದರು. ದಾಳಿ ನಡೆಸಿದ ವ್ಯಕ್ತಿ ಸ್ಟುಡಿಯೋ ಒಳಗೆ ಹಾಗೂ ಹೊರಗೆ ಓಡಾಡುತ್ತಲೇ ಇದ್ದ. ಗನ್’ಗೆ ಬುಲೆಟ್ ಗಳನ್ನು ಹಾಕುತ್ತಿದ್ದುದ್ದನ್ನು ನೋಡಿದ ಕೆಲವರು ಸ್ಟುಡಿಯೋ ಕಿಟಕಿಯಿಂದಲ್ ಜನರಿಗೆ ಎಚ್ಚರಿಕೆ ನೀಡಲು ಆರಂಭಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಪ್ರಸ್ತುತ ಸ್ಥಳಕ್ಕಾಗಮಿಸಿರುವ ಅಧಿಕಾರಿಗಳು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲು ಮಾಡಿದ್ದು, ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
loading...

 

loading...