ಬಿಜೆಪಿ ಕಚೇರಿಯಲ್ಲಿ ಅಂತಿಮ ನಮನ

0
0
loading...

ಬೆಂಗಳೂರು: ನಿನ್ನೆ ಅಗಲಿದ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್‍ಗೆ ಬಿಜೆಪಿ ಕಚೇರಿಯಲ್ಲಿ ಅಂತಿಮ ನಮನ ಸಲ್ಲಿಸಲಾಯಿತು.

ಸವನಗುಡಿಯಲ್ಲಿರುವ ಅನಂತ್ ಕುಮಾರ್‍ರ ನಿವಾಸದಿಂದ ಸೇನಾ ವಾಹನದಲ್ಲಿ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಬೆಳಗ್ಗೆ 9:10ಕ್ಕೆ ಸರಿಯಾಗಿ ಪಾರ್ಥೀವ ಶರೀರವನ್ನು ತರಲಾಯಿತು.
ಇಲ್ಲಿ 1 ಗಂಟೆ ಕಾಲ ಸಾರ್ವಜನಿಕರಿಗಾಗಿ ಪಾರ್ಥೀವ ಶರೀರದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಂತ್ರಪಠಣದೊಂದಿಗೆ ಅಂತಿಮ ನಮನ ಸಲ್ಲಿಕೆ ಮಾಡಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮೊದಲು ಪಕ್ಷದ ಪರವಾಗಿ ಅಂತಿಮ ನಮನ ಸಲ್ಲಿಸಿದರು.

ನಂತರ ಅನಂತ್ ಕುಮಾರ್ ಅವರ ಪತ್ನಿ, ಪುತ್ರಿಯರು ಸೇರಿದಂತೆ ಕುಟುಂಬ ಸದಸ್ಯರು ನಮನ ಸಲ್ಲಿಸಿದರು.

ಳಿಕ ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ, ಅನುರಾಗ್ ಠಾಕೂರ್, ಕೆ ಎಸ್ ಈಶ್ವರಪ್ಪ, ವಿ ಸೋಮಣ್ಣ, ಅರವಿಂದ ಲಿಂಬಾವಳಿ ಸೇರಿದಂತೆ ಪಕ್ಷದ ನಾಯಕರು, ಸಂಘ ಪರಿವಾರದ ಪ್ರಮುಖರು, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್, ರಾಜ್ಯ ಉಸ್ತುವಾರಿ ಮುರುಳೀಧರರಾವ್, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ರಾಜೀವ್ ಚಂದ್ರಶೇಖರ್, ವಿಶ್ವೇಶ್ವರ ಹೆಗಡೆ, ಸಂಜಯ್ ಜೋಶಿ, ಪಿ ರಾಮಯ್ಯ, ಎಂ ರಘುಪತಿ, ಆರ್ ಅಶೋಕ್, ರಾಮ್ ಲಾಲ್ ಜೀ,ಪಿ ಮುರಳೀಧರ ರಾವ್ ಸೇರಿದಂತೆ ಅನೇಕ ಗಣ್ಯರು ತಮ್ಮ ನೆಚ್ಚಿನ ನಾಯಕ ಅನಂತಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಗಣ್ಯರು ಹಾಗೂ ಸಾರ್ವಜನಿಕರ ದರ್ಶನದ ಬಳಿಕ 10.10ಕ್ಕೆ ಸರಿಯಾಗಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮೌನ ಶ್ರದ್ಧಾಂಜಲಿ ಸಲ್ಲಿಸಲಾ ಯಿತು.ನಂತರ 10:15ನಿಮಿಷಕ್ಕೆ ಸೇನಾ ಸಿಬ್ಬಂದಿ ಗೌರವ ಸಲ್ಲಿಕೆ ಮಾಡಿ ಪಾರ್ಥೀವ ಶರೀರವನ್ನು ಬಿಜೆಪಿ ಕಚೇರಿಯಿಂದ ಹೊರತಂದರು.

10:20 ನಿಮಿಷಕ್ಕೆ ಅನಂತ್ ಕುಮಾರ್ ಪಾರ್ಥೀವ ಶರೀರ ಹೊತ್ತ ಸೇನಾ ವಾಹನ ಬಿಜೆಪಿ ಕಚೇರಿಯಿಂದ ನಿರ್ಗಮಿಸಿ ನ್ಯಾಷನಲ್ ಕಾಲೇಜು ಮೈದಾನದ ಕಡೆ ಸಾಗಿತು.

ಪಾರ್ಥಿವ ಶರೀರ ಹೊತ್ತ ಸೇನಾ ವಾಹನದ ಜೊತೆ ಅನಂತ್ ಕುಮಾರ್ ಅವರ ನೂರಾರು ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಹೆಜ್ಜೆಹಾಕಿದರು. ಮೆರವಣಿಗೆಯುದ್ದಕ್ಕೂ ಅನಂತ್ ಕುಮಾರ್ ಅಮರ್ ರಹೇ ಎನ್ನುವ ಘೋಷಣೆಗಳನ್ನು ಮೊಳಗಿಸುತ್ತಾ ಸಾಗಿದರು. ಸದ್ಯ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ.

loading...