ಬೆಳಕಿನ ಹಬ್ಬಕ್ಕೆ ಭರ್ಜರಿ ತಯಾರಿ !

0
0
loading...

ಬೆಳಕಿನ ಹಬ್ಬಕ್ಕೆ ಭರ್ಜರಿ ತಯಾರಿ !

ಝಗಮಗಿಸುವ ಗೂಡು ದೀಪಗಳು : ವಸ್ತುಗಳ ಖರೀದಿ ಜೋರು

ಮಾಲತೇಶ ಮಟಿಗೇರ

ಬೆಳಗಾವಿ: ನಮಗೆ ದೀಪಾವಳಿ ಎಂದಾಕ್ಷಣ ಮನೆ ಮುಂದೆ ಬೆಳಗುವ ಹಣತೆ… ಆಕಾಶದಲ್ಲಿ ಚಿಮ್ಮುವ ಬಾಣಬಿರುಸು… ಕಿವಿಗೆ ಅಪ್ಪಳಿಸುವ ಪಟಾಕಿ ಸದ್ದು… ಅದಷ್ಟೆ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಈ ಹಬ್ಬದ ಆಚರಣೆಯ ಹಿಂದೆ ಹಲವು ಸಂಪ್ರದಾಯ, ಸಂಸ್ಕೃತಿ, ಇತಿಹಾಸ ಮಿಳಿತಗೊಂಡಿರುವುದು ಕಂಡು ಬರುತ್ತದೆ.
ದೀಪಾವಳಿ ಹಬ್ಬದ ಮೊದಲಿಗೆ ಎಣ್ಣೆ ಸ್ನಾನ ಮಾಡುವ ಸಂಪ್ರದಾಯವೂ ಇದೆ. ಇದಕ್ಕೆ ಕಾರಣ ಈ ದಿನ ತುಂಬುವ ಸ್ನಾನದ ನೀರಿನಲ್ಲಿ ಗಂಗೆಯೂ, ಎಣ್ಣೆಯಲ್ಲಿ ಧನಲಕ್ಷ್ಮೀಯೂ ಇರುತ್ತಾಳೆಂಬುದು ನಂಬಿಕೆ. ಈ ನೀರಿನಿಂದ ಸ್ನಾನ ಮಾಡಿದರೆ ಆಯುರಾರೋಗ್ಯ ಆಯಸ್ಸು ವೃದ್ಧಿಸುವುದೆಂದೂ ಮತ್ತು ಸಕಲ ಪಾಪಗಳೂ ನಿವಾರಣೆಯಾಗುವುದೆಂಬ ನಂಬಿಕೆಯಿದೆ. ನರಕಾಸುರನನ್ನು ಕೊಂದ ಪಾಪ ಪರಿಹಾರಕ್ಕಾಗಿ ಶ್ರೀಕೃಷ್ಣ ಕೂಡ ಈ ದಿನ ಎಣ್ಣೆಸ್ನಾನ ಶಾಸ್ತ್ರ ಮಾಡಿದ್ದನು ಎಂದು ಹೇಳಲಾಗುತ್ತದೆ. ಈ ದಿನ ಎಣ್ಣೆ ಸ್ನಾನದಿಂದ ಮಾಡಿದ ಪಾಪಗಳು ಪರಿಹಾರವಾಗಲಿವೆ ಎಂಬ ನಂಬಿಕೆ ಹಿಂದೂ ಸಂಪ್ರದಾಯದಲ್ಲಿದೆ.

ಅಮಾವಾಸ್ಯೆಯಂದು ಲಕ್ಷ್ಮಿ ಪೂಜೆ: ದೀಪಾವಳಿಯನ್ನು ಉತ್ತರ ಭಾರತೀಯರು ಅತೀ ವಿಜೃಂಭಣೆಯಿಂದ ಆಚರಿಸುತ್ತಾರೆ. ಅದರಲ್ಲೂ ವ್ಯಾಪಾರಿಗಳಿಗೆ ದೀಪ ಲಕ್ಷ್ಮೀ ಬೆಳಗಿ ಧನಲಕ್ಷ್ಮೀ ಬರುವ ಭಾಗ್ಯದ ದಿನವೇ ಆಗಿದೆ. ಅವರಿಗೆ ವ್ಯಾಪಾರ ವಹಿವಾಟಿನ ವಾಣಿಜ್ಯದ ನೂತನ ವರ್ಷ ಉದಯಿಸುವುದೇ ಈ ದಿನ. ಆದ್ದರಿಂದ ಅತ್ಯಂತ ಸಂತೋಷದಿಂದ ಕಾರ್ತಿಕ ಮಾಸದ ಆರಂಭದ ಈ ಅಮಾವಾಸ್ಯೆಯ ಮಹಾರಾತ್ರಿಯಲ್ಲಿ ಮಹಾಲಕ್ಷ್ಮೀಗೆ ಮಹದಾನಂದದಿಂದ ದೀಪಾರಾಧನೆಯೊಡನೆ ಲಕ್ಷ್ಮೀಪೂಜೆಯನ್ನು ಮಾಡುತ್ತಾರೆ.

ಎಣ್ಣೆ ಸ್ನಾನ : ಹಿಂದೂ ಧರ್ಮದ ಜನರು ದೀಪಾವಳಿ ಹಬ್ಬವನ್ನು ಪ್ರಪಂಚದ ಎಲ್ಲಡೆ ಬಹಳ ಸಂತೋಷ ಸಡಗರದಿಂದ ಆಚರಿಸುತ್ತಾರೆ. ದೀಪಾವಳಿ ಹಬ್ಬ ಬಂತೆಂದರೆ ಎಲ್ಲರಿಗೂ ಖುಷಿಯೋ ಖುಷಿ. ಅದರಲ್ಲಿ ಪ್ರಮುಖವಾಗಿ ಮಕ್ಕಳಿಗೆ. ಬಟ್ಟೆಗಳನ್ನು ಸಿಹಿತಿಂಡಿಗಳನ್ನು ಹಂಚಿ ಪಟಾಕಿಗಳನ್ನು ಸಿಡಿಸಿ ಬಹಳ ವಿಜೃಂಭಣೆಯಿಂದ ಈ ಹಬ್ಬದಲ್ಲಿ ಮಕ್ಕಳು ಮಗ್ನವಾಗುತ್ತಾರೆ. ಹಿಂದೂ ಸಂಸ್ಕೃತಿಯಲ್ಲಿ ದೀಪಾವಳಿಯನ್ನು ಒಂದೊಂದು ಕಡೇ ಒಂದು ರೀತಿಯಾಗಿ ಆಚರಣೆ ಮಾಡುತ್ತಾರೆ. ಉತ್ತರ ಕರ್ನಾಟಕದಲ್ಲಿ ಮೊದಲ ದಿನ ಎಣ್ಣೆ ಸ್ನಾನವನ್ನು ಮಾಡುತ್ತಾರೆ.

ಗ್ರಾಮೀಣ ಪ್ರದೇಶದಲ್ಲಿ ಗೋವರ್ಧನ ಪೂಜೆ: ಭಾರತೀಯ ಸಂಸ್ಕೃತಿಯಲ್ಲಿ ಗೋವುವಿಗೆ ವಿಶೇಷ ಸ್ಥಾನವಿದೆ. ದೀಪಾವಳಿಯ ಹಬ್ಬದಂದು ಗೋವುಗಳ ಪೂಜೆ ಮಾಡಲಾಗುತ್ತದೆ. ಎರಡನೇ ದಿನ ಗೋವುಗಳ ಸಗಣೆಯಿಂದ ಮನೆಯ ಮುಂದೆ ಗುಳ್ಳವ್ವಾ ಎಂದು ಇಡಲಾಗುತ್ತದೆ. ಮನೆಯ ತುಂಬಾ ಲಕ್ಷಿÃ ಆಗಮಿಸುತ್ತಾಳೆ ಎಂಬ ನಂಬಿಕೆಯಿಂದ ಹೆಜ್ಜೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಇಡಲಾಗುತ್ತದೆ. ಅಲ್ಲದೆ ಮನೆ ಬಾಗಿಲಿಗೆ ಗೂಡು ದೀಪಗಳ ಬುಟ್ಟಿಯನ್ನು, ಗ್ರಾಮೀಣ ಪ್ರದೇಶಗಳಲ್ಲಿ ಗೋವುಗಳ ದನಗಳ ಪೂಜೆ ಮಾಡುವುದು ಸಂಪ್ರಾದಾಯವಾಗಿದೆ.

ಒಟ್ಟಾರೆಯಾಗಿ ದೀಪಾವಳಿ ಹಬ್ಬವು ಹಿಂದೂ ಸಂಸ್ಕೃತಿ ಹಬ್ಬವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಗರ ಪ್ರದೇಶಗಳಲ್ಲಿ ವಿಭಿನ್ನವಾಗಿ ಆಚರಣೆ ಮಾಡುವ ಮೂಲಕ ಎಣ್ಣೆ ಸ್ನಾನದಿಂದ ಆಗಿರುವ ಪಾಪ ಹಾಗೂ ಜೀವನದಲ್ಲಿ ಬೆಳಕು ಇಂದಿನಿಂದ ಪ್ರಾರಂಭವಾಗಲಿ ಎಂಬ ಭಾವನೆಯಿಂದ ಹಬ್ಬ ಆಚರಣೆ ಮಾಡಲಾಗುತ್ತಿದೆ. ಈ ದೀಪಾವಳಿ ಎಲ್ಲರ ಬಾಳಲ್ಲಿ ಬೆಳಕು ಮೂಡಿಸಲಿ ಎಂಬುವುದು ನಮ್ಮ ಆಸೆಯವಾಗಿದೆ.

========ಬಾಕ್ಸ್==========

ಹಬ್ಬದ ವಸ್ತುಗಳ ಖರೀದಿ ಬಲು ಜೋರು
ದೀಪಾವಳಿ ಹಬ್ಬವು ಹಿಂದೂ ಧರ್ಮದವರಿಗೆ ದೀಪಗಳ ಹಬ್ಬವಾಗಿದೆ. ಹಬ್ಬ ಎರಡು ದಿನ ಇರುವ ಮೊದಲೇ ಮಾರುಕಟ್ಟೆಯಲ್ಲಿ ಕುಟುಂಬ ಸಮೇತ ಆಗಮಿಸಿ ವಸ್ತುಗಳ ಖರೀದಿಯಲ್ಲಿ ಸಾರ್ವಜನಿಕರು ತೊಡಗಿದ್ದಾರೆ. ಗೂಡು ದೀಪಗಳು ೧೦೦ ರಿಂದ ೧೦೦೦ ಸಾವಿರದವರೆಗೆ, ಮಣ್ಣಿನ ದ್ವಿÃಪ ಗಳು ಸಾಮಾನ್ಯವಾಗಿರುವಂತವು ೩೦ರಿಂದ ೪೦ ರೂಗೆ ಒಂದು ಕೆ.ಜಿ,ಅಲಂಕಾರಿಕವಾಗಿರುವವ ಒಂದಕ್ಕೆ ೧೦ರೂ.ದಿಂದ ೭೦ ರೂ., ರಂಗೋಲಿ ಚಿತ್ರಗಳು ೨೦ ರಿಂದ ೬೦ರೂ.,ಗೆ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ ಈ ಬಾರಿ ಹಬ್ಬದಲ್ಲಿ ಹೂವಿನ ಬೆಲೆ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ. ಒಂದು ೧೫ ರಿಂದ ೧೨೦ರೂ ವರೆಗೆ , ಹಣ್ಣಿನ ಬೆಲೆ ಯತಾಸ್ಥಿಯಲಿ ಮಾರಾಟ ಮಾಡುತ್ತಿದ್ದಾರೆ. ಇನ್ನೂ ಬಟ್ಟೆ ಅಂಗಡಿಗಳಲ್ಲಿ ಬಟ್ಟೆ ಸೇರಿದಂತೆ ಹಬ್ಬಕ್ಕೆ ಬೇಕಾಗುವಂತಹ ವಸ್ತುಗಳ ಖರೀದಿ ಬಲು ಜೋರಾಗಿಯೇ ನಡೆದಿದೆ.ದೇಶದಲ್ಲಿ ಶಾಂತಿ, ಮತ, ಸೌಹಾರ್ದತೆಯನ್ನುಂಟು ಮಾಡಲು ಇಂತಹ ಹಬ್ಬಗಳಿಗೆ ಸಾಧ್ಯವಾಗಲಿ. ಕೆಡುಕಿನ ಮೇಲೆ ಒಳಿತಿನ ಜಯವನ್ನು ಸಾರುವ ದೀಪಾವಳಿ ಹಬ್ಬವು ನಾಡಿನೆಲ್ಲೆಡೆ ಸುಖ, ಶಾಂತಿ, ಸೌಹಾರ್ದತೆಯ ವಾತಾವರಣವನ್ನು ಮೂಡಿಸಲಿವೆ.
===========ಬಾಕ್ಸ್============
ಸವೋಚ್ಛ ನ್ಯಾಯಾಲಯದ ಆದೇಶ

ದೀಪಾವಳಿ ಹಬ್ಬದ ದಿನದಂದು ಸಾರ್ವಜನಿಕರು ಎರಡು ಗಂಟೆ ಮಾತ್ರ ಪಟಾಕಿ ಸಿಡಿಸಬೇಕೆಂದು ಸರ್ವೋಚ್ಛ ನ್ಯಾಯಾಲಯದ ರಿಟ್ ಪೆಟಿಶನ್ ಸಂಖ್ಯೆ. ೭೨೮/೨೦೧೮ (ಸಿವ್ಹಿಲ್) ನೇದ್ದರ ಕುರಿತು ವಿಚಾರಣೆ ಕೈಗೊಂಡು ಪಟಾಕಿ ಸಿಡಿಸುವುದರ ಬಗ್ಗೆ ಆದೇಶ ಹೋರಡಿಸಲಾಗಿತ್ತು. ಆದೇಶದಂತೆ ರಾತ್ರಿ ೦೮ ಗಂಟೆಯಿಂದ ೧೦ ಗಂಟೆಯವರೆಗೆ ಮಾತ್ರ ಸಿಡಿಸಬೇಕು. ಪಾಲಕರು ತಮ್ಮ ಮಕ್ಕಳಿಗೂ ಸಹ ಈ ಬಗ್ಗೆ ತಿಳಿಹೇಳಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸದಂತೆ ನೋಡಿಕೊಳ್ಳುಬೇಕು. ಒಂದು ವೇಳೆ ನಿಯಮ ಮೀರಿ ಪಟಾಕಿ ಸಿಡಿದಲ್ಲಿ ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಲಾಗುವುದೆಂದು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
=======
ಹಿಂದೂ ಸಂಸ್ಕೃತಿಯಲ್ಲಿ ದೀಪಾವಳಿ ಹಬ್ಬವೆಂಬುದು ದೀಪದಿಂದ ದೀಪ ಹಚ್ಚುವ ರೀತಿಯಲ್ಲಿ ಪ್ರತಿಯೊಬ್ಬರು ಜೀವನದಲ್ಲಿ ಒಬ್ಬರಿಗೊಬ್ಬರು ಸಹಾಯ, ಸಹಕಾರದಿಂದ ಬದುಕುವುದಾಗಿದೆ. ಇಲ್ಲಿ ಎಣ್ಣೆ ಸ್ನಾನ ಮಾಡಲಾಗುತ್ತದೆ. ಪಾಪ ಕರ್ಮಗಳು ತೊಳೆಯಲಿ ಎಂಬ ನಂಬಿಕೆಯೂ ಇದೆ. ಕುಟುಂಬ ಸಮೇತ ಬಟ್ಟೆ, ಆಕಾಶ ಪೆಟ್ಟಿಗೆ ಖರೀದಿಸಲು ಬಂದಿದ್ದೆವೆ.

ಪ್ರವೀಣ ಪೂಜಾರ
ಸಾರ್ವಜನಿಕ

loading...