ಮಂಡ್ಯದ ಗಂಡು, ಹಿರಿಯ ನಟ ಅಂಬರೀಶ್ ಇನ್ನಿಲ್ಲ

0
95
loading...

ಮಂಡ್ಯದ ಗಂಡು, ಹಿರಿಯ ನಟ ಅಂಬರೀಶ್ ಇನ್ನಿಲ್ಲ

ಕನ್ನಡಮ್ಮ ಸುದ್ದಿ- ಬೆಳಗಾವಿ : ಕನ್ನಡ ಚಿತ್ರರಂಗದ ಹಿರಿಯ ನಟ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಅಂಬರೀಶ್ ವಿಧಿವಶರಾಗಿದ್ದಾರೆ.

ಅನಾರೋಗ್ಯ ದಿಂದ ಬಳಲುತ್ತಿದ್ದ ಅವರನ್ನು
ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ರಾತ್ರಿ 10.45 ಸುಮಾರಿಗೆ ಆಸ್ಪತ್ರೆ ಯಲ್ಲಿ ಕೊನೆ ಉಸಿರು ಎಳದಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆ ದೊಡ್ಡರಸನಕೆರೆ ಗ್ರಾಮದವರಾದ ಅಂಬರೀಶ್​​ 1952 ಮೇ 29ರಂದು, ಹುಚ್ಚೇಗೌಡ ಹಾಗೂ ಪದ್ಮಮ್ಮ ದಂಪತಿಯವರ ಪುತ್ರ. ಅಂಬರೀಶ್​ ಅವರ ಮೂಲ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್​​. ಖ್ಯಾತ ಪಿಟೀಲು ವಿದ್ವಾನ್​​ ಟ.ಚೌಡಯ್ಯ ಇವರ ಅಜ್ಜ. 1972ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್​ ನಿರ್ದೇಶನದ ‘ನಾಗರಹಾವು’ ಸಿನಿಮಾದ ಜಲೀಲ ಪಾತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅಂಬರೀಶ್ ಸುಮಾರು 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು..

loading...