ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕುಸ್ತಿ ಪಟುಗಳು

0
0
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಇಲ್ಲಿನ ಇಂಜಿನೀಯರಿಂಗ್‌ ಕಾಲೇಜಿನಲ್ಲಿ ನಡೆದ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದ 8 ಕುಸ್ತಿ ಪಟುಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹಳಿಯಾಳದ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್‌ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2018-19 ನೇ ಸಾಲಿನ ಪುರುಷರ ತಂಡದ ಕುಸ್ತಿ ತರಬೇತಿ ಶಿಬಿರವನ್ನು ನ.7 ರಿಂದ ಐದು ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ತರಬೇತಿ ಪಡೆದು ಇಂಜಿನೀಯರಿಂಗ್‌ ವಿಶ್ವವಿದ್ಯಾಲಯಗಳ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾದವರು ಇಂತಿದ್ದಾರೆ.
ನವೀನ ಬಳಗನ್ನವರ (ಕೆಎಲ್‌ಇ ಬೆಳಗಾವಿ), ಆದರ್ಶ ಆರ್‌. (ಮೈಸೂರು), ಸೂರ್ಯಜೀತ ಪಾಟೀಲ (ನಿಪ್ಪಾಣಿ), ಬಾನುಪ್ರತಾಪ ರೆಡ್ಡಿ (ಬೆಂಗಳೂರು), ಧರ್ನುಶ ಶೆಟ್ಟಿ (ಬೆಂಗಳೂರು), ವರುಣಕುಮಾರ ವಿ, (ಮಂಗಳೂರು), ಅಬ್ದುಲರೆಹಮಾನ ಖಾನ್‌ (ಬೆಂಗಳೂರು), ಶರ್ವತ್‌ ನಾರಾಯಣ (ಬೆಂಗಳೂರು).
ಶಿಬಿರದಲ್ಲಿ ತರಬೇತಿ ಪಡೆದ ತಂಡವು ನ. 14 ರಿಂದ ಐದು ದಿನಗಳವರೆಗೆ ಹರಿಯಾಣದ ಭಿವಾನಿಯ ಚೌಧರಿ ಬನ್ಸಿಲಾಲ್‌ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಅಂತರ ವಿಶ್ವವಿದ್ಯಾಲಯಗಳ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ.
ಮುಧೋಳ ಇಂಜನಿಯರಿಂಗ್‌ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹನುಮಂತ ತಳವಾರ್‌ ಅವರು ಈ ತಂಡದ ತರಬೇತುದಾರರಾಗಿದ್ದಾರೆ. ಹಳಿಯಾಳ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಗದಿಗೆಪ್ಪಾ ಯಳ್ಳೂರ್‌ ಅವರು ತಂಡದ ವ್ಯವಸ್ಥಾಪಕರಾಗಿದ್ದು, ಪ್ರಾಂಶುಪಾಲ ಡಾ|| ವಾದಿರಾಜ ಕಟ್ಟಿ ತಂಡಕ್ಕೆ ಸಮವಸ್ತ್ರ ವಿತರಿಸಿ ಶುಭ ಹಾರೈಸಿದರು.

loading...