ರೈತರಿಂದ ಉರುಳು ಸೇವೆ ಅರೆಬೆತ್ತಲೆ ಪ್ರತಿಭಟನೆ. || 19-11-2018

0
9
loading...

ಒಂದು ಕಡೆ ರೈತರ ಮುಗಿಲು ಮುಟ್ಟಿದ ಆಕ್ರೋಶ ಇನ್ನೊಂದು ಕಡೆ ಹಗಲು ರಾತ್ರಿ ಮುಂದುವರೆದ ಪ್ರತಿಭಟನೆ. ಅರೆ ಬೆತ್ತಲೆಯಾಗಿ ಬಾಯಿ ಬಡಿದುಕೊಂಡು ಉರುಳು ಸೇವೆ ಮಾಡಿದ ರೈತರು ಇಂತಹದೊಂದು ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಮುರಗುಂಡಿ ಗ್ರಾಮದಲ್ಲಿ. ಹೌದು ಕಳೆದ ಒಂದು ವಾರದಿಂದ ಕಾರ್ಖಾನೆ ಮಾಲೀಕರು ಮತ್ತು ರೈತರ ನಡುವಿನ ಹಗ್ಗ ಜಗ್ಗಾಟ ನಿಲ್ಲುವ ಲಕ್ಷಣ ಗಳು ಮಾತ್ರ ಕಾಣುತ್ತಿಲ್ಲ.ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚುವರಿ ಹಣ ಕೊಡ್ತೀವಿ ಅಂತ ಕಳೆದ ಬಾರಿ ಘೋಷಣೆ ಮಾಡಿದ್ದ ಕಾರ್ಖಾನೆ ಮಾಲೀಕರು ಎರಡನೆ ಹಂತದ ಹಣವನ್ನು ರೈತರಿಗೆ ನೀಡದೆ ಬಾಕಿ ಉಳಿಸಿಕೊಂಡ ಪರಿಣಾಮ ಸದ್ಯ ಅನ್ನದಾತರು ಅಲ್ಲಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಸಿ ಎಮ್ ಕುಮಾರಸ್ವಾಮಿ ಬೆಳಗಾವಿಗೆ ಬಂದು ಸಭೆ ನಡೆಸಲು ನಿರಾಕರಿಸಿದ್ದು ರೈತರ ಆಕ್ರೋಶ ಮುಗಿಲು ಮುಟ್ಟುವಂತಾಗಿದೆ.

loading...