ರೈತರಿಗೆ ಅರೆಸ್ಟ್ ವಾರಂಟ್ ಜಾರಿ

0
0
loading...

ಬೆಂಗಳೂರು: ಬೆಳಗಾವಿ ರೈತರ ಬಳಿಕ ಇದೀಗ ಚಾಮರಾಜನಗರ ರೈತರಿಗೂ ಅರೆಸ್ಟ್ ವಾರಂಟ್ ಜಾರಿಯಾಗಿದ್ದು, ಬಂಧನದ ಭೀತಿಯಿಂದ ಇಲ್ಲಿನ ರೈತರು ಕಂಗಾಲಾಗಿದ್ದಾರೆ.
ಚಾಮರಾಜನಗರ ರೈತರ ವಿರುದ್ಧ ಸಾಲ ವಸೂಲಿಗಾಗಿ ಆಕ್ಸಿಸ್ ಬ್ಯಾಂಕ್ ಕೊಲ್ಕತ್ತಾ ಕೋರ್ಟ್‍ನಲ್ಲಿ ದೂರು ದಾಖಲಿಸಿರುವುದರಿಂದ ಸದ್ಯ ರೈತರ ಬಂಧನಕ್ಕೆ ವಾರಂಟ್ ಜಾರಿಯಾಗಿದೆ.
ಇನ್ನು ಮೂರು ವರ್ಷಗಳ ಹಿಂದೆ ಚಾಮರಾಜನಗರ ಆಕ್ಸಿಸ್ ಬ್ಯಾಂಕ್‍ನಲ್ಲಿ ಚಾಮರಾಜನಗರ ತಾಲೂಕಿನ ವಿ.ಸಿ.ಹೊಸೂರು ರೈತ ಉಮಾಪತಿ 1 ಲಕ್ಷ 78 ಸಾವಿರ ರೂಪಾಯಿ ಸಾಲ ಪಡೆದಿದ್ದರು.ಆದರೆ ಬೆಳೆ ನಷ್ಟಗೊಂಡ ಹಿನ್ನೆಲೆಯಲ್ಲಿ ಸಾಲ ತೀರಿಸಲು ಆಗಲಿಲ್ಲ.ಇದರ ಪರಿಣಾಮ ಕೋಲ್ಕತ್ತಾದ ನ್ಯಾಯಾಲಯದಲ್ಲಿ ಆಕ್ಸಿಸ್ ಬ್ಯಾಂಕ್ ಚೆಕ್ ಬೌನ್ಸ್ ಕೇಸ್ ಹಾಕಿದ್ದು ಬಂಧನದ ವಾರಂಟ್ ಜಾರಿಯಾಗಿದೆ.
ಈ ನಡುವೆ ಚಾಮರಾಜನಗರ ವಿಜಯ ಬ್ಯಾಂಕ್ ಕೂಡ ರೈತರಿಗೆ ನೋಟಿಸ್ ಮೇಲೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ರಾಜ್ಯದಲ್ಲಿ ಸಾಲ ವಸೂಲಾತಿಗಾಗಿ ರೈತರಿಗೆ ತೊಂದರೆ ನೀಡದಂತೆ ಮುಖ್ಯಮಂತ್ರಿ ಸೂಚಿಸಿದ್ದರೂ ಕೇರ್ ಮಾಡದ ಬ್ಯಾಂಕ್ ಅಧಿಕಾರಿಗಳು ಮುಖ್ಯಮಂತ್ರಿಯನ್ನೆ ನಿಂದಿಸುತ್ತಾ ನೋಟಿಸ್ ಮೇಲೆ ನೋಟಿಸ್ ನೀಡುತ್ತಾ ಕಿರುಕುಳ ನೀಡುತ್ತಿದ್ದಾರೆ ಎಂದು ರೈತರು ಅಪಾದಿಸಿದ್ದಾರೆ. ಬ್ಯಾಂಕ್ ಗಳ ಕ್ರಮದಿಂದಾಗಿ ರೈತರು ಕಂಗೆಟ್ಟಿದ್ದು ತಲೆಮರೆಸಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

loading...