ರೈತರ ಹಿತ ಕಾಪಾಡುವಂತೆ  ಸಿಎಂ ನಿರ್ದೇಶನ ಹಿನ್ನಲೆ : ಬ್ಯಾಂಕ್ ಅಧಿಕಾರಿಗಳ ಸಭೆ

0
0
loading...

ರೈತರ ಹಿತ ಕಾಪಾಡುವಂತೆ  ಸಿಎಂ ನಿರ್ದೇಶನ ಹಿನ್ನಲೆ : ಬ್ಯಾಂಕ್ ಅಧಿಕಾರಿಗಳ ಸಭೆ

ಕನ್ನಡಮ್ಮ ಸುದ್ದಿ-ಬೆಳಗಾವಿ; ಆಕ್ಸಿಸ್ ಬ್ಯಾಂಕ್ ಕೋಲ್ಕೊತ್ತಾದ ನ್ಯಾಯಾಲಯದಲ್ಲಿ ಬೆಳಗಾವಿ ಜಿಲ್ಲೆಯ ರೈತರ ಮೇಲೆ ಮೊಕದ್ದಮೆ ದಾಖಲಿಸಿ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ,‌ಎಸ್ಪಿ ಎಕ್ಸಿಸ್ ಬ್ಯಾಂಕ್ ಅಧಿಕಾರಿಗಳ ಸಭೆ ಇಂದು ನಡೆಸಿದ್ದಾರೆ..

ಕೋಲ್ಕತಾ ಕೋರ್ಟ್‌   ಬಂಧನ ವಾರೆಂಟ್ ನೀಡಿರುವುದರಿಂದ ಈ ವಿಷಯ ತಿಳಿದು ಸಿಎಂ ಅವರು ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ರೈತರ ಹಿತ ಕಾಯುವಂತೆ ನಿರ್ದೇಶನ ನೀಡಿದ್ದರು.
ಆದ್ದರಿಂದ‌ ಬುಧವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ್ದದಾರೆ. ಈ ಸಮಸ್ಯೆಯನ್ನು ಬಗೆ ಹರಿಸಲು ಹಾಗೂ ಪ್ರಕರಣ ನ್ಯಾಯಾಲಯದ ಒಳ ಇರುವುದರಿಂದ ಕಾನೂನು ರೀತಿಯಲ್ಲಿ ‌ಸಮಸ್ಯೆಯನ್ನು ಬಗೆ‌ಹರಿಸುವುದರ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.

loading...