ವಿಶೇಷ ಪೂಜೆ: ಇಂದು ಮಹಿಳೆಯರಿಗೆ ಸಿಗಲಿದೆಯೇ ದರ್ಶನ ಅಯ್ಯಪ್ಪನ ?

0
0

ಶಬರಿಮಲೆ: ಸ್ವಾಮಿ ಅಯ್ಯಪ್ಪನ ವಿಶೇಷ ಪೂಜೆಗಾಗಿ ಸೋಮವಾರ ದೇಗುಲದ ಬಾಗಿಲು ಭಕ್ತರಿಗೆ ತೆರೆಯಲಿದ್ದು, ಮಹಿಳೆಯರು ಸಹ ಪ್ರವೇಶಿಸಲಿರುವುದರಿಂದ ಮತ್ತೊಮ್ಮೆ ಸಂಘರ್ಷ, ಹಿಂಸಾಚಾರ ಏರ್ಪಡುವ ಸಾಧ್ಯತೆಯಿದೆ.ಈ ನಿಟ್ಟಿನಲ್ಲಿ ಶಬರಿಮಲೆ ಸುತ್ತಮುತ್ತ  ಭಾರೀ ಪೊಲೀಸ್‌ ಬಿಗಿ ಭದ್ರತೆ ನಿಯೋಜಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆಯೂ ಜಾರಿ ಮಾಡಲಾಗಿದೆ. ಸುಮಾರು 2,300 ಪೊಲೀಸ್ ಸಿಬ್ಬಂದಿಗಳು, 20 ಕಮಾಂಡೊ ಸದಸ್ಯರು ಮತ್ತು 100 ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜನರು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಅಗತ್ಯಬಿದ್ದರೆ ಶಬರಿಮಲೆ ಸನ್ನಿಧಾನದಲ್ಲಿ ಇನ್ನೂ ಹೆಚ್ಚಿನ ಮಹಿಳಾ ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ಸಬ್ ಇನ್ಸ್ ಪೆಕ್ಟರ್ ನ್ನು ನೇಮಕ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

loading...