ಶಬರಿಮಲೆಗೆ ಮಹಿಳೆಯರ ಪ್ರವೇಶ ಸಿಗಬೇಕು; ಟಿಪ್ಪು ಅಪ್ಪಟ ದೇಶಭಕ್ತ : ಡಾ.ಜಯಮಾಲಾ

0
11
loading...

ಕಳೆದ ಏಳು ವರ್ಷಗಳಿಂದ ಶಬರಿಮಲೆಗೆ ಸ್ತ್ರೀ ಪ್ರವೇಶಕ್ಕೆ ಸಂಬಂಧಿಸಿದಂತೆ ಯಾವ ರೀತಿ ಸಂವಿಧಾನ ಹಕ್ಕು ಇದೆಯೇ ಅದು ಮಹಿಳೆರಿಗೆ ದೊರೆಯಬೇಕೆಂದು ಮಹಿಳಾ ಮತ್ತು ಮಕ್ಕಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಡಾ. ಜಯಮಾಲ ಹೇಳಿದರು.
ಅವರು ಮಂಗಳವಾರ ಸುದ್ದಿಗಾರೊಂದಿಗೆ ಮಾತನಾಡಿ, ಅವರು ಅಂಬೇಡ್ಕರ ಅವರು ಸಂವಿಧಾನ ರಚಿಸಿ ಮಹಿಳೆಯರಿಗೆ ರಕ್ಷಣೆ ನೀಡಿದ್ದಾರೆ. ಸಂವಿಧಾನದ ತಳಹದಿಯ ಮೇಲೆ ಪ್ರಜಾಪ್ರಭುತ್ವ ನಡೆಯುತ್ತಿದೆ. ಆದ್ದರಿಂದ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸುಪ್ರಿÃಂ ಕೋರ್ಟ್ ಅದನ್ನೆ ಪ್ರತಿಪಾಧಿಸುತ್ತದೆ ಎಂದು ನಂಬಿದ್ದನೆ. . ಆದ್ದರಿಂದಾಗಿ ಸಂವಿಧಾನ ಚೌಕಟ್ಟಿನಲ್ಲಿಯೇ ಕೋರ್ಟ ತೀರ್ಪು ಬರಲಿದೆ ಎಂದರು.ಅಲ್ಲದೆ ರಾಜ್ಯದಲ್ಲಿಯೇ ಟಿಪ್ಪು ಸುಲ್ತಾನ್ ಜಯಂತಿಯ ವಿರೋಧಕ್ಕೆ ಪ್ರತಿಕ್ರಿಯಿಸಿದ ಅವರು ಟಿಪ್ಪು ಜಯಂತಿ ನಮ್ಮ ರಾಜ್ಯದಲ್ಲಿ ಮಾಡದೇ ಮತ್ತೆ ಯಾವ ರಾಜ್ಯದಲ್ಲಿ ಮಾಡಲು ಸಾಧ್ಯ. ಟಿಪ್ಪು ದೇಶಕ್ಕೆ ಕೀರ್ತಿ ತಂದವರು. ದೇಶಕ್ಕೆ ತಮ್ಮ ಮಕ್ಕಳನ್ನೆ ಬಲಿದಾನವಿಟ್ಟವರು. ೨೦೧೫ ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿರುವ ವೇಳೆ ಜಯಂತಿ ಆಚರಣೆಗೆ ತಂದಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೊಗಬೇಕ್ಕಾಗಿದೆ. ಈ ವಿಷಕ್ಕೆ ಕೆಲವರು ವಿವಾಧಗಳನ್ನು ಶೃಷ್ಠಿ ಮಾಡುತ್ತಾರೆ ಎಂದು ಟಿಪ್ಪು ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.

loading...