ಶಬರಿಮಲೆಯಲ್ಲಿ ಬಿಗುವಿನ ವಾತಾವರಣ

0
0
loading...

ನವದೆಹಲಿ:ಗಲಾಟೆ, ದೊಂಬಿ ನಡುವೆಯೇ ಮತ್ತೆ ಶಬರಿಮಲೆಯಲ್ಲಿ ಅಯ್ಯಪ್ಪನ ಬಾಗಿಲು ತೆರೆಯುತ್ತಿದ್ದು, ಸ್ಥಳದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಶಬರಿಮಲೆಯಲ್ಲಿ ಅಯ್ಯಪ್ಪನ ಬಾಗಿಲು ತೆರೆಯುತ್ತಿದ್ದು,ಸ್ಥಳದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು,ಶಬರಿಮಲೆಯಲ್ಲಿ ಇಂದು ಸಂಜೆ ವಿಶೇಷ ಪೂಜೆ ನಡೆಯಲಿದೆ.
ಇದರ ಹಿನ್ನೆಲೆಯಲ್ಲಿ ಅಯ್ಯಪ್ಪನ ದರ್ಶನಕ್ಕೆ ಯಾವುದೇ ಅಡ್ಡಿ- ಆತಂಕ ಎದುರಾಗದಂತೆ ದೇವಸ್ಥಾನದ ಸುತ್ತಮುತ್ತ 2,300 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜೊತೆಯಲ್ಲಿ 20 ಕಮಾಂಡೋ ತಂಡ ಹಾಗೂ ನೂರು ಮಹಿಳೆಯರನ್ನು ಮುಂಜಾಗ್ರತಾ ಕ್ರಮವಾಗಿ ನಿಯುಕ್ತಿಗೊಳಿಸಲಾಗಿದೆ.
ಎಲ್ಲಾ ವಯೋಮಾನದ ಮಹಿಳೆಯರಿಗೂ ಅಯ್ಯಪ್ಪನ ದರ್ಶನಕ್ಕೆ ಅವಕಾಶ ನೀಡಿದ ಸುಪ್ರೀಂ ತೀರ್ಪಿನ ಬಳಿಕ ಎರಡನೇ ಬಾರಿ ದೇವಸ್ಥಾನದ ಬಾಗಿಲು ತೆರೆಯುತ್ತಿದ್ದು,ಪಂಬಾ,ನಿಲಕ್ಕಲ್ ಹಾಗೂ ಪಟ್ಟನಂತಿಟ್ಟ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಇಂದು ಸಂಜೆ ಐದು ಗಂಟೆಗೆ ಬಾಗಿಲು ತೆರೆಯಲಿದ್ದು ಮಂಗಳವಾರ ರಾತ್ರಿ ಹತ್ತು ಗಂಟೆಗೆ ಬಾಗಿಲು ಮುಚ್ಚಲಾಗುವುದು.

loading...